ಶಿವಾನಂದ ಪಾಟೀಲ್ ರಾಜೀನಾಮೆ ಪತ್ರ ಸಲ್ಲಿಸಿರುವ ಡ್ರಾಮಾ ಮಾಡುತ್ತಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ

Updated on: May 02, 2025 | 7:23 PM

ಇವತ್ತು ಶುಕ್ರವಾರ, ಅದರೆ ಬಸನಗೌಡ ಯತ್ನಾಳ್ ಮಂಗಳೂರಲ್ಲಿ ಶುಕ್ರವಾರದವರೆಗೆ ಇನ್ನೂ ಎರಡು ದಿನಗಳ ಸಮಯಾವಕಾಶವಿದೆ ಎಂದು ಹೇಳುತ್ತಾರೆ. ಶಿವಾನಂದ ಪಾಟೀಲ್ ರಾಜೀನಾಮೆ ಪತ್ರ ಅಂಗೀಕಾರವಾಗಬೇಕು ಮತ್ತು ಅದು ಗೆಜೆಟ್​​ನಲ್ಲಿ ನೋಟಿಫೈ ಅಗಬೇಕು, ನಾನು ಬಸವ ಜಯಂತಿಯಂದು ಹಾಕಿದ ಸವಾಲೇನು, ಶಿವಾನಂದ ಪಾಟೀಲ್ ಹೇಳುತ್ತಿರವುದೇನು? ಮಾಧ್ಯಮಗಳಲ್ಲ್ಲಿ ಎರಡು ದಿನ ಚರ್ಚೆ ನಡೆಯಲಿ ಎಂದು ಯತ್ನಾಳ್ ಹೇಳಿದರು.

ಮಂಗಳೂರು, ಮೇ 2: ನಿನ್ನೆ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಅಲ್ಲಿಂದ ಹೊರಡುವ ಮೊದಲು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಶಿವಾನಂದ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಒಂದು ನಾಟಕ ಮಾತ್ರ ಎಂದು ಹೇಳಿದರು. ರಾಜೀನಾಮೆ ಪತ್ರದಲ್ಲಿ ಯಾರೂ ಷರತ್ತುಗಳನ್ನು ಉಲ್ಲೇಖಿಸುವುದಿಲ್ಲ, ಕೇವಲ ಎರಡು ಸಾಲಿನ ಸಾರಾಶ ಮಾತ್ರ ಅದರಲ್ಲಿ ಇರಬೇಕು ಅಂತಿದೆ, ನನ್ನ ವೈಯಕ್ತಿಕ ಕಾರಣಗಳಿಂದಾಗಿ ಶಾಸಲ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಅಂತ ಹೇಳಿದರೆ ಸಾಕು, ರಾಜೀನಾಮೆ ಪತ್ರ ಬರೆಯುವಲ್ಲೂ ಶಿವಾನಂದ ಪಾಟೀಲ್ ಮೂರ್ಖತನ ಪ್ರದರ್ಶಿಸಿದ್ದಾರೆ ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ:  ಶಾಸಕ ಬಸನಗೌಡ ಯತ್ನಾಳ್ ಸವಾಲನ್ನು ಶಿವಾನಂದ ಪಾಟೀಲ್ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿದ್ದಾರೆ: ಸ್ಪೀಕರ್

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.