ಶಾಸಕ ಬಸನಗೌಡ ಯತ್ನಾಳ್ ಸವಾಲನ್ನು ಶಿವಾನಂದ ಪಾಟೀಲ್ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿದ್ದಾರೆ: ಸ್ಪೀಕರ್
ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ಸಲ್ಲಿಸಿರುವುದೇ ಕಾನೂನುಬಾಹಿರ, ಅದು ಸಿಂಧು ಅಲ್ಲ, ಆದರೂ ನೀವು ಅದನ್ನು ಹೇಗೆ ಸ್ವೀಕರಿಸಿದಿರಿ ಅಂತ ಪತ್ರಕರ್ತರೊಬ್ಬರು ಕೇಳಿದಾಗ ಖಾದರ್, ಅವರ ರಾಜೀನಾಮೆ ಪತ್ರ ಸ್ವೀಕರಿಸಿದ್ದೇನೆ, ಅಂಗೀಕರಿಸಿದ್ದೇನೆಂದು ಹೇಳಿಲ್ಲ, ಅದು ಸಂವಿಧಾನದ ನಿಯಮಾವಳಿಗಳ ಪ್ರಕಾರ ಅಂಗೀಕರಿಸಲು ಬರುತ್ತೋ ಇಲ್ಲವೇ ಪರಿಶೀಲಿಸಬೇಕು ಎಂದರು.
ಬೆಂಗಳೂರು, ಮೇ 2 : ಸಚಿವ ಶಿವಾನಂದ ಪಾಟೀಲ್ ನೀಡಿದ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ ಬಳಿಕ ಮಾತಾಡಿದ ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಸೆದಿರುವ ಸವಾಲನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡು ಶಿವಾನಂದ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದರು. ವೈಯಕ್ತಿಕ ವಿಚಾರಗಳನ್ನು ರಾಜಕಾರಣದಲ್ಲಿ ಬಳಸಬೇಕೋ ಇಲ್ಲವೊ ಅನ್ನೋದು ಅವರವರ ವಿವೇಚನೆ ಬಿಟ್ಟಿರುವ ವಿಚಾರ, ಎಲ್ಲವೂ ಬದಲಾಗುತ್ತಿರುವ ಹಾಗೆ ರಾಜಕಾರಣವೂ ಬದಲಾಗುತ್ತಿದೆ, ಪಾಟೀಲ್ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಪರಿಶೀಲನೆ ಮಾಡುತ್ತೇನೆ ಎಂದು ಖಾದರ್ ಹೇಳಿದರು.
ಇದನ್ನೂ ಓದಿ: ಸಚಿವ ಶಿವಾನಂದ ಪಾಟೀಲ್ ವಿರುದ್ಧ ಮಾನಹಾನಿಕರ ಹೇಳಿಕೆ: ಶಾಸಕ ಯತ್ನಾಳ್ಗೆ ಕೋರ್ಟ್ನಿಂದ ನೋಟಿಸ್
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಬ್ರೆಜಿಲ್ನಲ್ಲಿ ಸಂಭವಿಸಿದ ಕಾರು ಅಪಘಾತದ ಭಯಾನಕ ವಿಡಿಯೋ
Daily Devotional: ತುಳಸಿ ಕುಂಡದಲ್ಲಿರೋ ಮಣ್ಣಿನಿಂದ ಆಗುವ ಪ್ರಯೋಜನಗಳು
ಈ ರಾಶಿಯವರಿಗೆ ಅನುಕಂಪವೇ ಅಧಿಕವಾಗಿ ಕೆಲಸ ಮಾಡಲಿದ್ದು, ದುರುಪಯೋಗ ಸಾಧ್ಯತೆ
ನವೆಂಬರ್ ಕ್ರಾಂತಿ ಚರ್ಚೆ ನಡುವೆ ಸುರ್ಜೇವಾಲಾ ಭೇಟಿಯಾದ ಸಚಿವ ಜಾರಕಿಹೊಳಿ

