Speaker speaks; ಸಭಾಧ್ಯಕ್ಷನಾದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ, ಹಿಜಾಬ್ ವಿಚಾರ ನನ್ನ ವ್ಯಾಪ್ತಿಗೆ ಬರಲ್ಲ: ಯುಟಿ ಖಾದರ್, ಸ್ಪೀಕರ್
ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಸ್ಪೀಕರ್ ಖಾದರ್ ಹೇಳಿದರು.
ಮಂಗಳೂರು: ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷರಾಗಿ ಚುನಾಯಿತರಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಅಗಮಿಸಿದ ಯುಟಿ ಖಾದರ್ (UT Khader) ಅವರಿಗೆ ನಗರದ ಕದ್ರಿಯಲ್ಲಿರುವ ಸರ್ಕ್ಯೂಟ್ ಹೌಸ್ ನಲ್ಲಿ ಜನ ತಂಡೋಪತಂಡವಾಗಿ ಬಂದು ಅಭಿನಂದಿಸಿದರು. ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಅವರಿಗೆ ಹಿಜಾಬ್ ಕುರಿತಾದ ಪ್ರಶ್ನೆ ಕೇಳಲಾಯಿತು. ಹಿಜಾಬ್ ಗೆ (hijab) ಸಂಬಂಧಿಸಿದ ಕೆಲ ಪ್ರಕರಣಗಳು ಸುಪ್ರೀಮ್ ಕೋರ್ಟ್ ನಲ್ಲಿವೆ ಮತ್ತು ಸರ್ಕಾರ ಸಂವಿಧಾನಕ್ಕೆ (the Constitution) ವಿರುದ್ಧವಾಗಿ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಖಾದರ್ ಹೇಳಿದರು. ಮುಖ್ಯವಾಗಿ, ತಾವೀಗ ಸ್ಪೀಕರ್ ಆಗಿರುವುದರಿಂದ ಹಿಜಾಬ್ ವಿಷಯ ತಮ್ಮ ವ್ಯಾಪ್ತಿಗೆ ಬರೋದಿಲ್ಲ, ಯಾಕೆಂದರೆ, ಸಭಾಧ್ಯಕ್ಷನಾಗಿ ಚುನಾಯಿತನಾದ ಬಳಿಕ ತಾವು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ