Ashwath Narayan reacts; ಅಧಿಕಾರಕ್ಕೆ ಸಿಕ್ಕೊಡನೆ ಕಾಂಗ್ರೆಸ್ ದ್ವೇಷದ ರಾಜಕಾರಣ ಆರಂಭಿಸಿ, ನನ್ನ ವಿರುದ್ಧ ಕೊಲೆಯತ್ನ ಕೇಸ್ ಹಾಕಿಸಿದೆ: ಸಿಎನ್ ಅಶ್ವಥ್ ನಾರಾಯಣ
ಪೊಲೀಸರ ಮೇಲೆ ಒತ್ತಡ ಹೇರಿ ತಮ್ಮ ವಿರುದ್ಧ ಕೊಲೆಯತ್ನದ ಪ್ರಕರಣ ದಾಖಲಿಸಲಾಗಿದೆ ಎಂದು ಅಶ್ವಥ್ ನಾರಾಯಣ ಹೇಳಿದರು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಟಿಪ್ಪು ಸುಲ್ತಾನ್ (Tipu Sultan) ಮೇಲಿರುವ ಪ್ರೀತಿಯನ್ನು ಖಂಡಿಸಿದ್ದೇನೆಯೇ ಹೊರತು ಅವರ ಮೇಲೆ ತನಗೆ ಯಾವುದೇ ದ್ವೇಷವಿಲ್ಲ ಎಂದು ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಇಂದು ಹೇಳಿದರು. ನಗರದಲ್ಲಿಂದು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಮಾಜಿ ಸಚಿವರು, ತನ್ನ ಹೇಳಿಕೆಯಿಂದ ಸಿದ್ದರಾಮಯ್ಯನವರಿಗೆ ನೋವಾಗಿದ್ದ ಪಕ್ಷದಲ್ಲಿ ಅದಕ್ಕಾಗಿ ಸದನದಲ್ಲಿ ವಿಷಾದವನ್ನೂ ವ್ಯಕ್ತಪಡಿಸಿದ್ದೇನೆ, ಆ ಪ್ರಕರಣ ಅಲ್ಲಿಗೆ ಕೊನೆಗೊಳ್ಳಬೇಕಿತ್ತು, ಆದರೆ ಹಾಗಾಗುತ್ತಿಲ್ಲ, ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಕೂಡಲೇ ದ್ವೇಷದ ರಾಜಕಾರಣಕ್ಕೆ ಅಡಿಯಿರಿಸಿದೆ. ಪೊಲೀಸರ ಮೇಲೆ ಒತ್ತಡ ಹೇರಿ ತಮ್ಮ ವಿರುದ್ಧ ಕೊಲೆಯತ್ನದ ಪ್ರಕರಣ ದಾಖಲಿಸಲಾಗಿದೆ ಎಂದು ಅಶ್ವಥ್ ನಾರಾಯಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos