Prajadhvani Yatre: ಚಿತ್ರದುರ್ಗದ ಹಿರಿಯೂರಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ಯಾತ್ರೆಗೆ ಭರ್ಜರಿ ಸ್ವಾಗತ

|

Updated on: Feb 06, 2023 | 2:57 PM

ಜನ ತಮಗೆ ಸಾಧ್ಯವಿದ್ದ ವಾಹನಗಳ ಮೇಲೆ ಹತ್ತಿ ಪ್ರಜಾಧ್ವನಿ ವಾಹನದ ಮೇಲಿ ಪುಷ್ಪಾರ್ಷನೆ ಮಾಡಿದರು. ಆದರೆ ಮೆರವಣಿಗೆಯಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿತ್ತು.

ಚಿತ್ರದುರ್ಗ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ (Prajadhvani Yatre) ಜಿಲ್ಲೆಯ ಹಿರಿಯೂರು (Hiriyur) ತಲುಪಿದಾಗ ಪಟ್ಟಣದ ಜನರಿಂದ ಅದ್ದೂರಿ ಸ್ವಾಗತ ಸಿಕ್ಕಿತು. ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿರು ರಸ್ತೆಯಲ್ಲಿ ಡೋಲು ತಮ್ಮಟೆ ಸದ್ದು ಮಾಡುತ್ತಾ, ಪಟಾಕಿ ಸಿಡಿಸುತ್ತಾ, ಕುಣಿಯುತ್ತಾ ಸಂಭ್ರಮಿಸಿದರು. ಜನ ತಮಗೆ ಸಾಧ್ಯವಿದ್ದ ವಾಹನಗಳ ಮೇಲೆ ಹತ್ತಿ ಪ್ರಜಾಧ್ವನಿ ವಾಹನದ ಮೇಲಿ ಪುಷ್ಪಾರ್ಷನೆ ಮಾಡಿದರು. ಆದರೆ ಮೆರವಣಿಗೆಯಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿತ್ತು. ದೃಶ್ಯಗಳನ್ನು ವಿಡಿಯೋದಲ್ಲಿ ನೋಡಬಹುದು. ಹಿರಿಯೂರಿನ ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶವೊಂದು ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ