ಎಂಎಲ್​​ಎಗಳಿಗೆ ಗೌರವ ಕೊಡಿ: ಹಾಸನ ಡಿಸಿ ಬಗ್ಗೆ ಮತ್ತೆ ಬಹಿರಂಗ ಮನಸ್ತಾಪ ಹೊರಹಾಕಿದ ರೇವಣ್ಣ

Edited By:

Updated on: Oct 28, 2026 | 10:39 PM

ಮಾಜಿ ಸಚಿವ ಹೆಚ್.ಡಿ ರೇವಣ್ಣ, ಹಾಸನ ಜಿಲ್ಲಾಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲೆಯ ಬರ ಪರಿಹಾರ, ಶಾಸಕರ ಅನುದಾನ, ಪಂಚಾಯಿತಿಗಳ ಹಣಕಾಸು ಹಾಗೂ ಸೈಟ್ ವಿತರಣೆಯಲ್ಲಿನ ವಿಳಂಬಕ್ಕೆ ಡಿಸಿ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ ಎಂದು ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಾಸನ, ಅಕ್ಟೋಬರ್​​ 28: ‘ಎಂಎಲ್​​ಎಗಳಿಗೆ ಗೌರವ ಕೊಡಿ’ ಎಂದು ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಬಗ್ಗೆ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಮತ್ತೊಮ್ಮೆ ಬಹಿರಂಗವಾಗಿ ಮನಸ್ತಾಪ ಹೊರಹಾಕಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಒಬ್ಬ ಜಿಲ್ಲಾಧಿಕಾರಿಯಾದವರು ಪಕ್ಷಾತೀತವಾಗಿ ಎಲ್ಲಾ ಎಂಎಲ್ಎಗಳಿಗೆ ಫೋನ್ ಮಾಡಬೇಕು. ಕನಿಷ್ಠ ಒಂದು ಆಸ್ಪತ್ರೆಯ ವಿಷಯದಲ್ಲಾದರೂ ಜಿಲ್ಲಾಧಿಕಾರಿಗಳು ಎಂಎಲ್ಎ, ಎಂಎಲ್ಸಿಗಳಿಗೆ ಕರೆ ಮಾಡಬಾರದಾ’ ಎಂದು ಪ್ರಶ್ನಿಸಿದ್ದಾರೆ. ‘ತಾವು ಯಾರೊಬ್ಬರಿಗೂ ಫೋನ್ ಮಾಡಿವುದಿಲ್ಲ, ಗುಮಾಸ್ತರಿಂದ ಫೋನ್ ಮಾಡಿಸುತ್ತಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಎಂಎಲ್ಎಗಳಿಗೆ ಗೌರವ ನೀಡಬೇಕು’ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More