ಕೊಡಗು ಡಿಸಿ ಕಚೇರಿ ಮುಂದಿನಿಂದ ಹಾದುಹೋಗುವ ರಾಹೆ ಪಕ್ಕದ ತಡೆಗೋಡೆ ಮತ್ತಷ್ಟು ಶಿಥಿಲ, ಪರ್ಯಾಯ ರಸ್ತೆ ಕಲ್ಪಿಸಿದ ಪೊಲೀಸರು
ದುರಸ್ತಿ ಕಾರ್ಯ ಜಾರಿಯಲ್ಲಿದೆ

ಕೊಡಗು ಡಿಸಿ ಕಚೇರಿ ಮುಂದಿನಿಂದ ಹಾದುಹೋಗುವ ರಾಹೆ ಪಕ್ಕದ ತಡೆಗೋಡೆ ಮತ್ತಷ್ಟು ಶಿಥಿಲ, ಪರ್ಯಾಯ ರಸ್ತೆ ಕಲ್ಪಿಸಿದ ಪೊಲೀಸರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 18, 2022 | 11:09 AM

ತಡೆಗೋಡೆ ಪಕ್ಕದಿಂದಲೇ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅದನ್ನು ಬಂದ್ ಮಾಡಿ ಪರ್ಯಾಯ ದಾರಿಯನ್ನು ಕಲ್ಪಿಸಿದ್ದಾರೆ.

ಕೊಡಗು ಜಿಲ್ಲಾಧಿಕಾರಿಗಳ (DC office) ಕಚೇರಿ ಮುಂದಿನ ತಡೆಗೋಡೆ ಮತ್ತಷ್ಟು ಶಿಥಿಗೊಂಡಿದ್ದು (fragile) ಯಾವುದೇ ಸಮಯದಲ್ಲಿ ಕುಸಿದು ಬೀಳಬಹುದಾದ ಸ್ಥಿತಿಯನ್ನು ತಲಪಿದೆ. ತಡೆಗೋಡೆ ಪಕ್ಕದಿಂದಲೇ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ (precautionary measure) ಪೊಲೀಸರು ಅದನ್ನು ಬಂದ್ ಮಾಡಿ ಪರ್ಯಾಯ ದಾರಿಯನ್ನು ಕಲ್ಪಿಸಿದ್ದಾರೆ. ಇಂಜಿನಿಯರ್ ಗಳು ತಡೆಗೋಡೆ ಕುಸಿಯುವುದನ್ನು ತಡೆಯಲು ಪ್ರಯತ್ನಿಸುತ್ತಿರುವುದು ವಿಡಿಯೋನಲ್ಲಿ ನೋಡಬಹುದು.