ಕೋಲಾರ: ಪೊಲೀಸ್ ಇಲಾಖೆಗೆ ನೀವು ಅನ್ ಫಿಟ್, ಪಿಎಸ್ಐ ಮೇಲೆ‌ ನಿವೃತ್ತ ಎಎಸ್​ಐನ ದರ್ಪ

| Updated By: ವಿವೇಕ ಬಿರಾದಾರ

Updated on: Dec 12, 2023 | 8:10 AM

ಪೊಲೀಸ್ ಇಲಾಖೆಗೆ ನೀವು ಅನ್ ಫಿಟ್, ಕೆಲಸ ಬಿಟ್ಟು ಮನಗೆ ಹೋಗಿ ಎಂದು ಗೌನಪಲ್ಲಿ ಪಿಎಸ್​ಐ ರಾಮು ಮೇಲೆ ನಿವೃತ್ತ ಎಎಸ್ಐ ರಾಜಗೋಪಾಲರೆಡ್ಡಿ ಮತ್ತು ಅವರ ಮಗ ಹರೀಶ್ ಅವರು ದರ್ಪ ತೋರಿದ್ದಾರೆ.

ಕೋಲಾರ, ಡಿಸೆಂಬರ್​ 11: ಪಿಎಸ್ಐ (PSI) ಮೇಲೆ‌ ನಿವೃತ್ತ ಎಎಸ್​ಐ (ASI) ದರ್ಪ ತೋರಿರುವ ಘಟನೆ ಶ್ರೀನಿವಾಸಪುರ (Srinivaspur) ತಾಲೂಕಿನ ಬೀಮಗಾನಪಲ್ಲಿ ಕ್ರಾಸ್ ಬಳಿ ನಡೆದಿದೆ. ಡಿಸೆಂಬರ್​ 7 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದ ಗೌನಪಲ್ಲಿ ಪಿಎಸ್​ಐ ರಾಮು ಮೇಲೆ ನಿವೃತ್ತ ಎಎಸ್ಐ ರಾಜಗೋಪಾಲರೆಡ್ಡಿ ಮತ್ತು ಅವರ ಮಗ ಹರೀಶ್ ಅವರು ದರ್ಪ ತೋರಿದ್ದಾರೆ.

ಪೊಲೀಸ್ ಇಲಾಖೆಗೆ ನೀವು ಅನ್ ಫಿಟ್, ಕೆಲಸ ಬಿಟ್ಟು ಮನಗೆ ಹೋಗುವಂತೆ ಅವಾಜ್​ ಹಾಕಿದ್ದಾರೆ. ದರ್ಪ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಎಸ್​ಐ ರಾಮು ಅವರಿಗೆ ಅವಾಚ್ಯ ಶಬ್ದಗಳಿಂದ‌ ನಿಂದನೆ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ನಿವೃತ್ತ ರಾಜಗೋಪಾಲರೆಡ್ಡಿ ಮತ್ತು ಹರೀಶ್ ರೆಡ್ಡಿ ಮೇಲೆ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಹಳೆಯ ಪ್ರಕಣದವೊಂದರಲ್ಲಿ ತಮಗೆ ಅನುಕೂಲ ಮಾಡಿಲ್ಲವೆಂದು ನಿವೃತ್ತ ರಾಜಗೋಪಾಲರೆಡ್ಡಿ ಪಿಎಸ್​ಐ ರಾಮು ಅವರ ಮೇಲೆ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.