ಮೈಸೂರು: ಸರ್ಕಾರೀ ಅಧಿಕಾರಿಗಳಲ್ಲಿ ಕರ್ತವ್ಯಲೋಲುಪತೆ, ಜಡತ್ವ, ಕರ್ತವ್ಯಲೋಪವನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಯಾವ ಕಾರಣಕ್ಕೂ ಸಹಿಸಲ್ಲ. ಅವರು ನಡೆಸುವ ಪ್ರಗತಿ ಪರಿಶೀಲನಾ ಸಭೆಗಳನ್ನು (KDP meeting) ನೀವು ನೋಡಿರಬಹುದು. ಮುಲಾಜಿಲ್ಲದೆ ತಪ್ಪಿತಸ್ಥ ಆಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇಂದು ಅವರು ಜಿಲ್ಲೆಯ ಹುಣಸೂರು ತಾಲ್ಲೂಕು ಕಚೇರಿಗೆ (Hunsur taluk office) ಸರ್ಪೈಸ್ ಭೇಟಿ ನೀಡಿ ಅಲ್ಲಿನ ನ್ಯೂನತೆಗಳನ್ನು ಕಂಡು ಅಧಿಕಾರಿಗಳ ಬೇಜವಬ್ದಾರಿತನವನ್ನು ತರಾಟೆಗೆ ತೆಗೆದುಕೊಂಡರು. ನಿರ್ದಿಷ್ಟವಾಗಿ ಜುಲೈ ತಿಂಗಳ ಎಂಟ್ರಿಗಳು ಮತ್ತು ಫಾರ್ವರ್ಡ್ ಆಗಿರುವ ಕಡತಗಳ ಬಗ್ಗೆ ಹಲವಾರು ಲೋಪಗಳನ್ನು ಅವರೆದುರು ಕೈಕಟ್ಟಿ ನಿಂತಿದ್ದ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಗಮನಕ್ಕೆ ತಂದರು. ಅವರ ಯಾವ ಪ್ರಶ್ನೆಗೂ ಅಧಿಕಾರಿಗಳಿಂದ ಸಮಾಧಾನಕರ ಉತ್ತರ ಸಿಗಲಿಲ್ಲ. ಕಚೇರಿಯ ಒಂದು ಗುಡ್ಡೆ ಬಿದ್ದಿದ್ದ ಕಡತಗಳನ್ನು ನೋಡಿ ಅವುಗಳ ಸ್ಟೇಟಸ್ ಬಗ್ಗೆ ವಿಚಾರಿಸಿದರು. ಅಧಿಕಾರಿಗಳದ್ದು ಅದೇ ಪೆ ಪೆ ಪೆ ಉತ್ತರ. ಈ ವಿಡಿಯೋದಲ್ಲಿ ಗಮನಿಸಬೇಕಾದ ಅಂಶವೆಂದರೆ, ಅಧಿಕಾರಿಗಳ ಕರ್ತವ್ಯಲೋಪ ನಿಚ್ಚಳವಾಗಿ ಕಾಣುತ್ತಿದ್ದರೂ ಮತ್ತು ತಮ್ಮ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೂ ಸಚಿವ ಕೃಷ್ಣ ಭೈರೇಗೌಡ ಅವರ ಮೇಲೆ ರೇಗುತ್ತಾರೆಯೇ ಹೊರತು, ಏಕವಚನದ ಪ್ರಯೋಗ ಮಾಡಲ್ಲ, ಬಯ್ಯಲ್ಲ; ಸಭ್ಯ ಭಾಷೆಯಲ್ಲೇ ತರಾಟೆಗೆ ತೆಗೆದುಕೊಳ್ಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ