ರಾಯಚೂರು: ಕೆಡಿಪಿ ಸಭೆಯಲ್ಲಿ ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಬೆವರಿಳಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ
ರಾಯಚೂರಿನಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕರ್ತವ್ಯಲೋಪ ಎಸಗಿದ ಆಧಿಕಾರಿಗಳನ್ನು ಎಲ್ಲರ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡರು. ನಿಮಗೆ ಬೇಕಾದವರ ಪೈಲ್ ಗಳನ್ನು ಮೂವ್ ಮಾಡುತ್ತೀರಿ, ಬೇಡವಾದವರ ಪೈಲ್ ಗಳನ್ನು ಹಾಗೆ ಇಟ್ಟ್ಟುಕೊಳ್ಳುತ್ತೀರಿ ಇಲ್ಲವೇ ಎಲ್ಲೋ ಬಿಸಾಡಿ ಕಳೆದುಬಿಡುತ್ತೀರಿ ಎಂದು ಸಚಿವರು ರೇಗಿದರು.
ರಾಯಚೂರು: ವಿರೋಧ ಪಕ್ಷಗಳ ಟೀಕೆಗಳ ನಡುವೆ ಸಿದ್ದರಾಮಯ್ಯ ಸರ್ಕಾರ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಿದೆ. ಅತ್ತ ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಿರಿಯ ಪೋಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಅಂತ ತಾಕೀತು ಮಾಡಿದರೆ, ಜನಸ್ಪಂದನಾ ಕಾರ್ಯಕ್ರಮ ನಡೆಸುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಲಂಚಕೋರ ಆಧಿಕಾರಿಗಳನ್ನು ಸ್ಥಳದಲ್ಲೇ ಸಸ್ಪೆಂಡ್ ಮಾಡುತ್ತಿದ್ದಾರೆ. ಇತ್ತ ರಾಜಧಾನಿಯಿಂದ ದೂರದ ರಾಯಚೂರಿನಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಕರ್ತವ್ಯಲೋಪ ಎಸಗಿದ ಆಧಿಕಾರಿಗಳನ್ನು ಎಲ್ಲರ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡರು. ನಿಮಗೆ ಬೇಕಾದವರ ಪೈಲ್ ಗಳನ್ನು ಮೂವ್ ಮಾಡುತ್ತೀರಿ, ಬೇಡವಾದವರ ಪೈಲ್ ಗಳನ್ನು ಹಾಗೆ ಇಟ್ಟ್ಟುಕೊಳ್ಳುತ್ತೀರಿ ಇಲ್ಲವೇ ಎಲ್ಲೋ ಬಿಸಾಡಿ ಕಳೆದುಬಿಡುತ್ತೀರಿ ಎಂದ ಸಚಿವರು, ಫೈಲ್ ಗಳ ಮೂವ್ಮೆಂಟ್ ಮತ್ತು ಕೈಯಾರೆ ಫೈಲ್ ಗಳನ್ನು ಸ್ವೀಕರಿಸುತ್ತಿರುವ ಅಧಿಕಾರಿಗಳ ಬೆವರಿಳಿಸಿದ್ದನ್ನು ದೃಶ್ಯಗಳಲ್ಲಿ ನೋಡಬಹುದು.
ರಾಯಚೂರಿನ ಮಹಿಳಾ ಅಸಿಸ್ಟಂಟ್ ಕಮೀಶನರ್ ಅವಕೃಪೆಗೊಳಗಾದವರಲ್ಲಿ ಒಬ್ಬರು. ಮ್ಯಾನುಯಲ್ಲೀ ಫೈಲ್ಗಳನ್ನು ಸ್ವೀಕರಿಸಿಬಾರದೆಂದು ಹೇಳಿದರೂ ಯಾಕೆ ಸ್ವೀಕರಿಸುತ್ತೀರಿ? ತಿಂಗಳಿಗೆ ಎರಡು ಸಲ ಕೆಡಿಪಿ ಮೀಟಿಂಗ್ ನಡೆಯುತ್ತದೆ, ನಾವು ನೀಡುವ ಸೂಚನೆ ನೀವು ಕೇಳಿಸಿಕೊಳ್ಳುವುದಿಲ್ಲ ಅನ್ನೋದು ಸ್ಪಷ್ಟವಾಗತ್ತದೆ, ಕಾಫೀ ಟೀ ಕುಡಿಯುವುದಕ್ಕೋಸ್ಕರ ಸಭೆ ನಡೆಸುತ್ತೇವೆಯೇ ಎಂದು ಕೃಷ್ಣ ಭೈರೇಗೌಡ ಬೆಂಕಿಯುಗುಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

