ಅಯೋಧ್ಯೆಯ ರಾಮಮಂದಿರ ಬಳಿಯ ಪೆಂಡಾಲ್ ನಲ್ಲಿ ಮೂರ್ತಿಗಳ ಮೂಲಕ ರಾಮಕಥಾ ವಿವರಣೆ!

ಅಯೋಧ್ಯೆಯ ರಾಮಮಂದಿರ ಬಳಿಯ ಪೆಂಡಾಲ್ ನಲ್ಲಿ ಮೂರ್ತಿಗಳ ಮೂಲಕ ರಾಮಕಥಾ ವಿವರಣೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 16, 2024 | 5:05 PM

ಅಯೋಧ್ಯೆಯ ಕರಸೇವಕ ಪುರಂನಲ್ಲಿ ಅಷ್ಟ ಸಹಸ್ರ ಯಗ್ಯ ನಡೆಯುತ್ತಿದ್ದರೆ ರಾಮಮಂದಿರದ ಹತ್ತಿರದಲ್ಲೇ ಒಂದು ಬೃಹತ್ ಪೆಂಡಾಲ್ ನಲ್ಲಿ ಎರಡು ದಿನಗಳಿಂದ ರಾಮಕಥಾ ಜಾರಿಯಲ್ಲಿದೆ. ಇಲ್ಲಿನ ಆವರಣದಲ್ಲಿ ರಾಮಾಯಣದ ದೃಶ್ಯಕಾವ್ಯ ಅನಾವರಣಗೊಂಡಿರುವುದನ್ನು ನೋಡಬಹುದು.

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲೀಗ ಎಲ್ಲವೂ ರಾಮಮಯ. ಎತ್ತ ನೋಡಿದರೂ ರಾಮನಾಮದ ಜಪ ಮತ್ತು ಭಜನೆ.  ಧಾರ್ಮಿಕ ನಗರಿಯಲ್ಲಿ ಕಾಲಿಟ್ಟೊಡನೆಯೇ ಜನ ಒಂದು ವಿಶಿಷ್ಟ ಅನುಭೂತಿಗೊಳಗಾಗವುದು ನಿಶ್ಚಿತ. ಅಯೋಧ್ಯೆಯ ಕರಸೇವಕ ಪುರಂನಲ್ಲಿ ಅಷ್ಟ ಸಹಸ್ರ ಯಗ್ಯ ನಡೆಯುತ್ತಿದ್ದರೆ ರಾಮಮಂದಿರದ ಹತ್ತಿರದಲ್ಲೇ ಒಂದು ಬೃಹತ್ ಪೆಂಡಾಲ್ ನಲ್ಲಿ ಎರಡು ದಿನಗಳಿಂದ ರಾಮಕಥಾ ಜಾರಿಯಲ್ಲಿದೆ. ಟಿವಿ9 ಕನ್ನಡ ವಾಹಿನಿಯ ವರದಿಗಾರ ಹೇಳುವಂತೆ ಇದು ರಾಮಚರಿತ ಮಾನಸ ಆಧಾರಿತ ರಾಮಕಥಾ. ಇಲ್ಲಿನ ಆವರಣದಲ್ಲಿ ರಾಮಾಯಣದ ದೃಶ್ಯಕಾವ್ಯ ಅನಾವರಣಗೊಂಡಿರುವುದನ್ನು ನೋಡಬಹುದು. ಅಯೋಧ್ಯೆಗೆ ಭೇಟಿ ನೀಡುವ ಜನರಿಗೆ ರಾಮಾಯಣದ ಪ್ರಮುಖ ಪ್ರಸಂಗಗಳನ್ನು ಮೂರ್ತಿ ಮತ್ತು ಕಲಾಕೃತಿಗಳ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ರಾಮ-ಲಕ್ಷ್ಮಣ-ಸೀತೆಯರ ಮೂರ್ತಿಗಳು, ಅವರ ವನವಾಸದ ಬಗ್ಗೆ ಹೇಳುವ, ಅಂಜನೇಯ ರಾಮಸೇತು ಕಟ್ಟಿದ ಸಂದರ್ಭಗಳನ್ನು ವಿವರಿಸುವ ಮೂರ್ತಿಗಳನ್ನು ದೃಶ್ಯಗಳಲ್ಲಿ ನೋಡಬಹುದು. ಒಟ್ಟಿನಲ್ಲಿ ರಾಮನ ಬಗ್ಗೆ ಹಲವಾರು ಅಂಶಗಳನ್ನು ಇಲ್ಲಿಗೆ ಬರುವ ಜನರಿಗೆ ಕಟ್ಟಿಕೊಡುವ ಪಯತ್ನವನ್ನು ಈ ಪೆಂಡಾಲ್ ನಲ್ಲಿ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ