ತಮಿಳುನಾಡಿನ ಮಂಗಳಮುಖಿಯಿಂದ ಹೈಡ್ರಾಮಾ! ಬೇಸ್ತುಬಿದ್ದ ಚಿಕ್ಕಬಳ್ಳಾಪುರ ಪೊಲೀಸರು ಏನು ಮಾಡಿದರು ಗೊತ್ತಾ?
ಒಂದು ಹಂತದಲ್ಲಿ, ಮೈಮೇಲೆ ಹಾಕಿಕೊಂಡಿದ್ದ ಶರ್ಟ್ ಬಿಚ್ಚಿ ಸಂಪೂರ್ಣ ಬೆತ್ತಲಾಗುವುದಾಗಿಯೂ ಮಂಗಳಮುಖಿ ಬೆದರಿಕೆ ಹಾಕಿದಳು. ಮಂಗಳಮುಖಿಯನ್ನು ವಶಕ್ಕೆ ಪಡೆದು ಪೊಲೀಸರು ಸಮಾಧಾನ ಹೇಳಿದರು. ಕೊನೆಗೆ, ಮಂಗಳಮುಖಿಗೆ ಹೊಸ ಬಟ್ಟೆ ಕೊಡಿಸಿ, 500 ರೂಪಾಯಿ ಹಣ ನೀಡಿ ಬೀಳ್ಕೊಡುಗೆ ನೀಡಲಾಯಿತು.
ಚಿಕ್ಕಬಳ್ಳಾಪುರದಲ್ಲಿ ನಡುರಸ್ತೆಯಲ್ಲಿ ತಮಿಳುನಾಡು ಮೂಲದ ಮಂಗಳಮುಖಿ ಹೈಡ್ರಾಮಾ ನಡೆಸಿದ್ದಾಳೆ. ನಡುರಸ್ತೆಯಲ್ಲಿ ಅರೆಬೆತ್ತಲಾಗಿ ಬಸ್ ಕಂಡೆಕ್ಟರ್ ವಿರುದ್ಧ ಪ್ರತಿಭಟನೆ ನಡೆಸಿರುವ ಘಟನೆ ಇಂದು ನಡೆದಿದೆ. KSRTC ಬಸ್ಸಿನಲ್ಲಿ ಮಂಗಳಮುಖಿ ಪ್ರಯಾಣಿಸುತ್ತಿದ್ದಾಗ ಕಂಡಕ್ಟರ್ ಮುಂದೆ ಹೋಗು ಎಂದಿದಕ್ಕೆ ಅವರಿಬ್ಬರ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ. ಜೊತೆಗೆ, ಬಸ್ ಪ್ರಯಾಣಿಕರು ಹಾಗೂ ಕಂಡೆಕ್ಟರ್ ಜೊತೆಗೆ ಮಂಗಳಮುಖಿ ವಾಗ್ವಾದಕ್ಕೆ ಇಳಿದಿದ್ದಾಳೆ. ಇದರಿಂದ ಮಂಗಳಮುಖಿಯನ್ನ ಕಂಡಕ್ಟರ್ ಬಸ್ಸಿನಿಂದ ಇಳಿಸಿದ್ದಕ್ಕೆ ನಡುರಸ್ತೆಯಲ್ಲೇ ಹೈಡ್ರಾಮಾ ನಡೆಸಿದ್ದಾಳೆ.
ಬಸ್ಸಿನಿಂದ ರಸ್ತೆಗೆ ಇಳಿದ ಮೇಲೆ ಮತ್ತೊಂದು ರೂಪ ತೋರಿಸಿದ ಮಂಗಳಮುಖಿಯು ಕಂಡಕ್ಟರ್ ತನ್ನ ಮೊಬೈಲ್ ಪೋನ್ ಹಾಗೂ ಹಣ ಕಿತ್ತುಕೊಂಡಿದ್ದಾನೆಂದು ಆರೋಪಿಸಿದ್ದಾಳೆ. ಈಶಾ ಫೌಂಡೇಷನ್‍ನಿಂದ ಬೆಂಗಳೂರಿಗೆ ಹೋಗಲು ಮಂಗಳಮುಖಿ KSRTC ಬಸ್ ಹತ್ತಿದ್ದಳು.
ಒಂದು ಹಂತದಲ್ಲಿ, ಮೈಮೇಲೆ ಹಾಕಿಕೊಂಡಿದ್ದ ಶರ್ಟ್ ಬಿಚ್ಚಿ ಸಂಪೂರ್ಣ ಬೆತ್ತಲಾಗುವುದಾಗಿಯೂ ಮಂಗಳಮುಖಿ ಬೆದರಿಕೆ ಹಾಕಿದಳು. ಮಂಗಳಮುಖಿಯನ್ನು ವಶಕ್ಕೆ ಪಡೆದು ಪೊಲೀಸರು ಸಮಾಧಾನ ಹೇಳಿದರು. ನಗರಠಾಣೆ ಪಿಎಸ್‍ಐ ನಂಜುಂಡಯ್ಯ ಸಮಾಧಾನ ಪಡಿಸಿದರು. ಕೊನೆಗೆ, ಮಂಗಳಮುಖಿಗೆ ಹೊಸ ಬಟ್ಟೆ ಕೊಡಿಸಿ, 500 ರೂಪಾಯಿ ಹಣ ನೀಡಿ ಬೀಳ್ಕೊಡುಗೆ ನೀಡಲಾಯಿತು.