ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ಸು ಪಡೆಯಲು ಅಯೋಧ್ಯೆಯಲ್ಲಿ ಅಷ್ಟೋತ್ತರ ಸಹಸ್ರ ಯಗ್ಯ
ರವಿವಾರ ಆರಂಭಗೊಂಡಿರುವ ಅಷ್ಟೋತ್ತರ ಸಹಸ್ರ ಯಗ್ಯ ರಾಮಮಂದಿರ ಪ್ರಾಣ ಪ್ರತಿಷ್ಠೆ ನಡೆಯುವ ಜನವರಿ 22 ರಂದು ಪೂರ್ಣಗೊಳ್ಳಲಿದೆ. ಆ ದಿನಾಂಕವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಯಜ್ಞಕಾರ್ಯ ಆರಂಭಿಸಲಾಯಿತೇ ಅಂತ ಕೇಳಿದರೆ, ಅದೊಂದು ಸುಯೋಗದ ಕಾಕತಾಳೀಯ, ಹಾಗೆ ನೋಡಿದರೆ, ಅಷ್ಟೋತ್ತರ ಸಹಸ್ರ ಯಗ್ಯ ಕಾರ್ಯಕ್ರಮವನ್ನು ಒಂದು ವರ್ಷದಷ್ಟು ಹಿಂದೆಯೇ ರೂಪಿಸಲಾಗಿತ್ತು ಅಂತ ಅರ್ಚಕರು ಹೇಳುತ್ತಾರೆ.
ಅಯೋಧ್ಯೆ: ಭವ್ಯವಾಗಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ದಿನಕ್ಕೆ ಕೇವಲ ಒಂದು ವಾರ ಉಳಿದಿರುವಂತೆಯೇ ಅಯೋಧ್ಯೆಯಲ್ಲಿ ಪೂಜಾ ಕೈಂಕರ್ಯಗಳು ಶ್ರದ್ಧೆ ಮತ್ತು ನಿಷ್ಠೆಯೊಂದಿಗೆ ಆರಂಭವಾಗಿವೆ. ಟಿವಿ9 ದೆಹಲಿ ವರದಿಗಾರ ಹರೀಶ್ ಅಯೋಧ್ಯೆಯ ಬೃಹತ್ ಕರಸೇವಕ್ ಪುರಂ ಮೈದಾನಲ್ಲಿ ಜನೆವರಿ 14 ರಿಂದ ಅರಂಭಗೊಂಡಿರುವ ಅಷ್ಟೋತ್ತರ ಸಹಸ್ರ ಯಗ್ಯ (ಯಾಗ) ಯಜ್ಞಕಾರ್ಯದ ವರದಿಯನ್ನು ಕಳಿಸಿದ್ದಾರೆ. ಯಜ್ಞಕಾರ್ಯದಲ್ಲಿ (ಹೋಮ) ಭಾಗಿಯಾಗಿರುವ ಅರ್ಚಕರೊಬ್ಬರು ನೀಡುವ ಮಾಹಿತಿ ಪ್ರಕಾರ ರವಿವಾರ ಆರಂಭಗೊಂಡಿರುವ ಅಷ್ಟೋತ್ತರ ಸಹಸ್ರ ಯಗ್ಯ ರಾಮಮಂದಿರ ಪ್ರಾಣ ಪ್ರತಿಷ್ಠೆ ನಡೆಯುವ ಜನವರಿ 22 ರಂದು ಪೂರ್ಣಗೊಳ್ಳಲಿದೆ. ಆ ದಿನಾಂಕವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಯಜ್ಞಕಾರ್ಯ ಆರಂಭಿಸಲಾಯಿತೇ ಅಂತ ಕೇಳಿದರೆ, ಅದೊಂದು ಸುಯೋಗದ ಕಾಕತಾಳೀಯ, ಹಾಗೆ ನೋಡಿದರೆ, ಅಷ್ಟೋತ್ತರ ಸಹಸ್ರ ಯಗ್ಯ ಕಾರ್ಯಕ್ರಮವನ್ನು ಒಂದು ವರ್ಷದಷ್ಟು ಹಿಂದೆಯೇ ರೂಪಿಸಲಾಗಿತ್ತು ಎಂದು ಹೇಳುವ ಅರ್ಚಕರು ಯಜ್ಞ ಒಂದು ಶ್ರೇಷ್ಠ ಕರ್ಮ ಎಂದು ಗುರುತಿಸಿಕೊಳ್ಳುತ್ತದೆ ಮತ್ತು ಗುರಿಸಾಧನೆಗೆ ಇದನ್ನು ಮಾಡಲಾಗುತ್ತದೆ ಎನ್ನುತ್ತಾರೆ.
ರಾಮ ಭದ್ರಾಚಾರ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಯಜ್ಞಕಾರ್ಯದಲ್ಲಿ 1008 ಯಜ್ಞಕುಂಡಗಳಿವೆ ಮತ್ತು 2,200 ಯಾಜಕರು ಪೂಜೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತ ಸ್ವಾಧೀನಪಡಿಸಿಕೊಳ್ಳಲು ಯಾಗ ನಡೆಸಲಾಗುತ್ತಿದೆ ಎಂದು ಅರ್ಚಕರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ