IND-W vs SL-W: 6,6,4,6.. ಒಂದೇ ಓವರ್ನಲ್ಲಿ ಲಂಕಾ ಸ್ಪಿನ್ನರ್ ಬೆವರಿಳಿಸಿದ ರಿಚಾ ಘೋಷ್
Richa Ghosh batting: ಶ್ರೀಲಂಕಾ ವಿರುದ್ಧದ ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತ ಮಹಿಳಾ ತಂಡ 221 ರನ್ ಗಳಿಸಿ ಅಂತರರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ತಮ್ಮ ಸಾರ್ವಕಾಲಿಕ ಅತಿ ಹೆಚ್ಚು ಸ್ಕೋರ್ ದಾಖಲಿಸಿದೆ. ಸ್ಮೃತಿ, ಶಫಾಲಿ ಮತ್ತು ರಿಚಾ ಘೋಷ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ರಿಚಾ ಘೋಷ್ ಕೊನೆಯ ಓವರ್‌ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡವನ್ನು 200 ರನ್ ಗಡಿ ದಾಟಿಸಲು ನೆರವಾದರು. ಇದು ಟೀಮ್ ಇಂಡಿಯಾದ ಶ್ರೇಷ್ಠ ಸಾಧನೆ.
ಶ್ರೀಲಂಕಾ ವಿರುದ್ಧದ ನಾಲ್ಕನೇ ಟಿ20ಪಂದ್ಯದಲ್ಲಿ ಭಾರತ 221 ರನ್ ಗಳಿಸಿತು. ಇದು ಅಂತರರಾಷ್ಟ್ರೀಯ ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಅತ್ಯಧಿಕ ಸ್ಕೋರ್ ಆಗಿದೆ. ತಂಡ ಇಷ್ಟು ಬೃಹತ್ ಮೊತ್ತ ಕಲೆಹಾಕುವಲ್ಲಿ ಸ್ಮೃತಿ, ಶಫಾಲಿ ಹಾಗೂ ರಿಚಾ ಘೋಷ್ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ರಿಚಾ ತಂಡವನ್ನು 200 ರನ್ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಪಂದ್ಯದ 19ನೇ ಓವರ್ನಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದ ರಿಚಾ, ಈ ಓವರ್ನ ಕೊನೆಯ 4 ಎಸೆತಗಳನ್ನು ಬೌಂಡರಿಗಟ್ಟಿದರು. ಮೂರು ಹಾಗೂ 4ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಿಚಾ, ಐದನೇ ಎಸೆತದಲ್ಲಿ ಬೌಂಡರಿ ಕಲೆಹಾಕಿದರೆ, ಕೊನೆಯ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸರ್ ಬಾರಿಸಿದರು. ಈ ಮೂಲಕ ಈ ಓವರ್ನಲ್ಲಿ 23 ರನ್ಗಳು ಬಂದವು. ಮಾತ್ರವಲ್ಲದೆ ಅಂತಿಮ 10 ಓವರ್‌ಗಳಲ್ಲಿ ಭಾರತ ಬರೋಬ್ಬರಿ 136 ರನ್‌ಗಳನ್ನು ಕಲೆಹಾಕಿತು. ಈ ಪಂದ್ಯದಲ್ಲಿ ಕೇವಲ 16 ಎಸೆತಗಳನ್ನು ಎದುರಿಸಿದ ರಿಚಾ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 40 ರನ್ ಬಾರಿಸಿದರು.