ಬಿಗ್ ಬಾಸ್ ಮನೆಯಲ್ಲಿ ಗರಂ ಆದ ರಿಷಾ: ಗಿಲ್ಲಿ ನಟ, ಸೂರಜ್ ಟಾರ್ಗೆಟ್

Updated on: Nov 04, 2025 | 4:04 PM

ರಿಷಾ ಅವರು ಬಿಗ್ ಬಾಸ್ ಮನೆಯಲ್ಲಿ ಕೂಗಾಟ, ಕಿರುಚಾಟ ಜಾಸ್ತಿ ಮಾಡಿದ್ದಾರೆ. ಇತ್ತೀಚೆಗೆ ಅವರ ಮುಖಕ್ಕೆ ಸ್ಪರ್ಧಿಗಳು ಮಸಿ ಬಳಿದಿದ್ದರು. ಆ ಬಳಿಕ ಅವರ ಆರ್ಭಟ ಜಾಸ್ತಿ ಆಗಿದೆ. ಅವಕಾಶ ಸಿಕ್ಕಲ್ಲೆಲ್ಲ ರಿಷಾ ಜಗಳ ಮಾಡಲು ಆರಂಭಿಸಿದ್ದಾರೆ. ಗಿಲ್ಲಿ ಮತ್ತು ಸೂರಜ್ ಸಿಂಗ್ ಕಂಡರೆ ರಿಷಾ ಉರಿದು ಬೀಳುತ್ತಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ (Bigg Boss Kannada Season 12) ಮನೆಗೆ ಬಂದ ರಿಷಾ ಅವರು ಕೂಗಾಟ, ಕಿರುಚಾಟ ಜಾಸ್ತಿ ಮಾಡಿದ್ದಾರೆ. ಇತ್ತೀಚೆಗೆ ಅವರ ಮುಖಕ್ಕೆ ಅನೇಕರು ಮಸಿ ಬಳಿದರು. ಆ ಬಳಿಕ ಅವರ ಆರ್ಭಟ ಜಾಸ್ತಿ ಆಗಿದೆ. ಅವಕಾಶ ಸಿಕ್ಕಲ್ಲೆಲ್ಲ ಅವರು ಜಗಳ ಮಾಡಲು ಆರಂಭಿಸಿದ್ದಾರೆ. ಗಿಲ್ಲಿ ನಟ (Gilli Nata) ಹಾಗೂ ಸೂರಜ್ ಸಿಂಗ್ ಅವರನ್ನು ಕಂಡರೆ ರಿಷಾ ಉರಿದು ಬೀಳುತ್ತಿದ್ದಾರೆ. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದಾರೆ. ‘ಕಳ್ಳನನ್ನು ನಂಬಿದರೂ ಮಳ್ಳನನ್ನು ನಂಬಲ್ಲ’ ಎಂದು ಅವರ ಎದುರಲ್ಲೇ ರಿಷಾ ಕೂಗಾಡಿದ್ದಾರೆ. ಇದರಿಂದಾಗಿ ರಿಷಾ, ಸೂರಜ್ ಹಾಗೂ ರಿಷಾ (Risha) ನಡುವೆ ಬಿರುಕು ಹೆಚ್ಚಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನ ನವೆಂಬರ್ 4ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.