ರಿಷಾ ಮುಖಕ್ಕೆ ಮಸಿ ಬಳಿದು ಕೆಂಡದಂತಹ ಕಾರಣ ನೀಡಿದ ರಘು, ಗಿಲ್ಲಿ
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಬಂದ ರಿಷಾ ಹಲವರು ಟೀಕೆಗೆ ಗುರಿಯಾಗಿದ್ದಾರೆ. ಗಿಲ್ಲಿ ಜತೆ ಆರಂಭದಲ್ಲಿ ರಿಷಾ ಆತ್ಮೀಯವಾಗಿ ಇದ್ದರು. ಆದರೆ ಈಗ ಗಿಲ್ಲಿ ಮತ್ತು ರಿಷಾ ನಡುವೆ ಜಗಳ ಆಗಿದೆ. ಗಿಲ್ಲಿ ಮಾತ್ರವಲ್ಲದೇ ಧನುಶ್, ರಘು, ಅಭಿಷೇಕ್ ಮುಂತಾದವರು ರಿಷಾ ವರ್ತನೆಯನ್ನು ಖಂಡಿಸಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದ ರಿಷಾ (Risha) ಅವರು ಅನೇಕರು ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಗಿಲ್ಲಿ ನಟ (Gilli Nata) ಜೊತೆ ಆರಂಭದಲ್ಲಿ ಅವರು ಆತ್ಮೀಯವಾಗಿ ನಡೆದುಕೊಂಡಿದ್ದರು. ಆದರೆ ಈಗ ಗಿಲ್ಲಿ ಹಾಗೂ ರಿಷಾ ನಡುವೆ ಜಗಳ ಶುರುವಾಗಿದೆ. ಗಿಲ್ಲಿ ಮಾತ್ರವಲ್ಲದೇ ಧನುಶ್, ರಘು ಮುಂತಾದವರು ಕೂಡ ರಿಷಾ ವರ್ತನೆಯನ್ನು ಖಂಡಿಸಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ನೆಮ್ಮದಿ ಹಾಳಾಗುತ್ತಿರುವುದು ರಿಷಾ ಅವರಿಂದ’ ಎಂದು ಅಭಿಷೇಕ್ ಹೇಳಿದ್ದಾರೆ. ರಿಷಾ ಮುಖಕ್ಕೆ ಮಸಿ ಬಳಿಯಲಾಗಿದೆ. ಅದಕ್ಕೆ ಸೂಕ್ತ ಕಾರಣವನ್ನೂ ನೀಡಲಾಗಿದೆ. ‘ನಾನು ಇರುವುದೇ ಹೀಗೆ’ ಎಂದು ರಿಷಾ ಅವರು ವಾದ ಮಾಡಿದ್ದಾರೆ. ‘ಮನೆಯಲ್ಲಿ ನಾನು ಹೆಂಗೆಂಗೋ ಇರುತ್ತೇನೆ. ಮನೆಯಲ್ಲಿ ಇರುವ ಹಾಗೆ ನಾನು ಇಲ್ಲಿ ಬಟ್ಟೆ ಬಿಚ್ಚಿಕೊಂಡು ಇದ್ದರೆ ಚಪ್ಪಲಿ ತಗೊಂಡು ಹೊಡೆದು ಆಚೆ ಕಳಿಸುತ್ತಾರೆ’ ಎಂದು ರಿಷಾಗೆ ರಘು ಅವರು ತಿರುಗೇಟು ನೀಡಿದ್ದಾರೆ. ನವೆಂಬರ್ 3ರ ಬಿಗ್ ಬಾಸ್ (Bigg Boss Kannada 12) ಸಂಚಿಕೆಯ ಪ್ರೋಮೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

