AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತನ್ನೆಲ್ಲ ಸುತ್ತುವ ಆರ್​ಜೆಡಿ, ಕಾಂಗ್ರೆಸ್ ನಾಯಕರಿಗೆ ಅಯೋಧ್ಯೆಗೆ ಹೋಗಲು ಪುರುಸೊತ್ತಿಲ್ಲ; ಪ್ರಧಾನಿ ಮೋದಿ ಲೇವಡಿ

ಜಗತ್ತನ್ನೆಲ್ಲ ಸುತ್ತುವ ಆರ್​ಜೆಡಿ, ಕಾಂಗ್ರೆಸ್ ನಾಯಕರಿಗೆ ಅಯೋಧ್ಯೆಗೆ ಹೋಗಲು ಪುರುಸೊತ್ತಿಲ್ಲ; ಪ್ರಧಾನಿ ಮೋದಿ ಲೇವಡಿ

ಸುಷ್ಮಾ ಚಕ್ರೆ
|

Updated on: Nov 03, 2025 | 5:29 PM

Share

ಹ್ಯಾಲೋವೀನ್ ಆಚರಿಸುವ ಆರ್​ಜೆಡಿ ನಾಯಕರು ಛತ್ ಪೂಜೆ ವೀಡಿಯೊವನ್ನು ಪ್ರಧಾನಿ ಮೋದಿ ಟೀಕಿಸಿದ್ದಾರೆ. 'ಆರ್‌ಜೆಡಿ ಅಂತಾರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಲ್ಲಿ ನಿರತವಾಗಿದೆ' ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್-ಆರ್‌ಜೆಡಿ ನಮ್ಮ ನಂಬಿಕೆಯನ್ನು ಅಗೌರವಿಸುವಲ್ಲಿ ಪರಿಣಿತರು. ಆರ್‌ಜೆಡಿ ನಾಯಕರು ಮಹಾಕುಂಭವನ್ನು 'ಫಾಲ್ಟು' ಎಂದು ಕರೆದರೆ, ಕಾಂಗ್ರೆಸ್ 'ನಾಮದಾರ್' ಛತ್ ಮಹಾಪರ್ವವನ್ನು 'ನಾಟಕ' ಎಂದು ಕರೆದಿದ್ದಾರೆ ಎಂದು ಟೀಕಿಸಿದ್ದಾರೆ.

ಪಾಟ್ನಾ, ನವೆಂಬರ್ 3: ಮಹಾಕುಂಭ, ಛತ್ ಪೂಜೆಯನ್ನು ಟೀಕಿಸುವ ಆರ್​ಜೆಡಿ ನಾಯಕರು ಹ್ಯಾಲೋವೀನ್​ನಂತಹ ಅಂತಾರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ (PM Modi) ಲಾಲು ಪ್ರಸಾದ್ ಯಾದವ್ ಅವರನ್ನು ಲೇವಡಿ ಮಾಡಿದ್ದಾರೆ.

“ಈ ಆರ್‌ಜೆಡಿ ಮತ್ತು ಕಾಂಗ್ರೆಸ್ ಜನರು ಪ್ರಪಂಚದಾದ್ಯಂತ ಪ್ರಯಾಣಿಸುತ್ತಾರೆ. ನಾವು ಅದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಓದುತ್ತಲೇ ಇರುತ್ತೇವೆ. ಆದರೆ ಅವರಿಗೆ ರಾಮ ಮಂದಿರಕ್ಕೆ ಭೇಟಿ ನೀಡಲು ಸಮಯ ಸಿಗುತ್ತಿಲ್ಲ. ನಿಷಾದ್ ರಾಜ್‌ಗಾಗಿ ಅಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಗಿದೆ. ಅಯೋಧ್ಯೆಯಲ್ಲಿ ಭಗವಾನ್ ವಾಲ್ಮೀಕಿಯ ದೇವಸ್ಥಾನವೂ ಇದೆ. ಅಯೋಧ್ಯೆಯಲ್ಲಿ ಶಬರಿ ಮಾತೆಯ ದೇವಸ್ಥಾನವೂ ಇದೆ. ಅವರಿಗೆ ರಾಮನಿಗೆ ಪೂಜೆ ಸಲ್ಲಿಸಲು ಇಷ್ಟವಿಲ್ಲದಿದ್ದರೆ ನಿಷಾದ್ ರಾಜ್‌ನ ಪಾದಗಳಿಗೆ ತಲೆಬಾಗಲಿ. ಅದಕ್ಕೆ ಏಕೆ ನಾಚಿಕೆಪಡಬೇಕು?” ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ