ತಾವು ಕಲಿತ ಶಾಲೆ ದತ್ತು ಪಡೆದ ರಿಷಬ್ ಶೆಟ್ಟಿ: ಶಿಕ್ಷಕರು ಹೇಳಿದ್ದು ಹೀಗೆ…
Rishab Shetty: ನಟ, ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗಷ್ಟೆ ತಾವು ಕಲಿತ ಕೆರಾಡಿಯ ಶಾಲೆಗೆ ಭೇಟಿ ನೀಡಿ ಮಕ್ಕಳೊಟ್ಟಿಗೆ ಬೆರೆತರು. ಶಾಲೆಯನ್ನು ದತ್ತು ಪಡೆಯುವುದಾಗಿಯೂ ಘೋಷಿಸಿದರು. ಈ ಬಗ್ಗೆ ಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದಾರೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಇತ್ತೀಚೆಗೆ ತಾವು ಓದು ಕಲಿತ ಕೆರಾಡಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಮಕ್ಕಳೊಟ್ಟಿಗೆ, ಶಿಕ್ಷಕರೊಟ್ಟಿಗೆ ಕಾಲ ಕಳೆದ ನಟ ರಿಷಬ್ ಶೆಟ್ಟಿ ಶಾಲೆಯನ್ನು ತಾವು ದತ್ತು ಪಡೆಯುತ್ತಿರುವುದಾಗಿ ಘೋಷಿಸಿದರು. ರಿಷಬ್ ಶೆಟ್ಟಿಯವರ ಭೇಟಿ ಹಾಗೂ ಶಾಲೆಯನ್ನು ಅವರು ದತ್ತು ತೆಗೆದುಕೊಂಡಿದ್ದು ಏಕೆ ಎಂಬ ಬಗ್ಗೆ ಶಾಲೆಯ ಶಿಕ್ಷಕರು ಮಾತನಾಡಿದ್ದಾರೆ. ರಿಷಬ್ ಓದಿದ ಶಾಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅವುಗಳನ್ನೆಲ್ಲ ಗುರುತಿಸಿರುವ ರಿಷಬ್ ಶೆಟ್ಟಿ ಸಾಧ್ಯವಾದಷ್ಟು ಅದನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ