ಡೈರೆಕ್ಟ್ ಪ್ರಪೋಸ್, ಭೇಟಿಯಾದ ಒಂದೇ ವರ್ಷದಲ್ಲಿ ಮದುವೆ; ಇದು ರಿಷಬ್-ಪ್ರಗತಿ ಲವ್ ಸ್ಟೋರಿ
ರಿಷಬ್ ಆಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ರಿಷಬ್ ಹಾಗೂ ಪ್ರಗತಿ ಮಧ್ಯೆ ಲವ್ ಆಗಿತ್ತು. ಇವರ ಲವ್ ಸ್ಟೋರಿ ಆರಂಭ ಆಗಿದ್ದು ಹೇಗೆ ಎನ್ನುವ ಬಗ್ಗೆ ಪ್ರಗತಿ ಶೆಟ್ಟಿ ಅವರು ಟಿವಿ9 ಕನ್ನಡದ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿ (Rishab Shetty) ಹಾಗೂ ಪ್ರಗತಿ ಶೆಟ್ಟಿ ಅವರದ್ದು ಲವ್ ಮ್ಯಾರೇಜ್. ರಿಷಬ್ ಆಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ರಿಷಬ್ ಹಾಗೂ ಪ್ರಗತಿ (Pragathi Shetty) ಮಧ್ಯೆ ಲವ್ ಆಗಿತ್ತು. ಇವರ ಲವ್ ಸ್ಟೋರಿ ಆರಂಭ ಆಗಿದ್ದು ಹೇಗೆ ಎನ್ನುವ ಬಗ್ಗೆ ಪ್ರಗತಿ ಶೆಟ್ಟಿ ಅವರು ಟಿವಿ9 ಕನ್ನಡದ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷ ಸಂದರ್ಶನದಲ್ಲಿ ‘ರಿಕ್ಕಿ’ ಚಿತ್ರದ ಸಂದರ್ಭದ ಘಟನೆಯನ್ನು ವಿವರಿಸಿದ್ದಾರೆ.