ರಾಯಚೂರು ಥರ್ಮಲ್ ಸ್ಥಾವರದಲ್ಲಿ ಅಗ್ನಿದುರಂತ, ಯಾವುದೇ ಪ್ರಾಣಾಪಾಯವಿಲ್ಲ!

ರಾಯಚೂರು ಥರ್ಮಲ್ ಸ್ಥಾವರದಲ್ಲಿ ಅಗ್ನಿದುರಂತ, ಯಾವುದೇ ಪ್ರಾಣಾಪಾಯವಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 08, 2022 | 11:01 AM

ಅದೇ ಸಮಯಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಘಟಕಕ್ಕೆ ಹಾನಿ ಸಂಭವಿದೆಯಾದರೂ ಪ್ರಾಣಾಪಾಯವೇನೂ ಅಗಿಲ್ಲ.

ರಾಯಚೂರು: ನಗರಕ್ಕೆ ಹತ್ತ್ತಿರದ ಶಕ್ತಿನಗರದಲ್ಲಿರುವ ರಾಯಚೂರು ಥರ್ಮಲ್ ಪ್ಲ್ಯಾಂಟ್ ನಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಅಗ್ನಿ ಅವಘಡ (fire mishap) ಸಂಭವಿಸಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವಿದ್ಯುತ್ ಉತ್ಪಾದನೆ ಸಮಯದಲ್ಲಿ ಚೇಂಬರೊಂದಕ್ಕೆ (Chamber) ಬೆಂಕಿ ಹೊತ್ತಿಕೊಂಡಿದೆ. ಆ ವಿಭಾಗದಲ್ಲಿ ಆಗ ಒಬ್ಬನೇ ಸಿಬ್ಬಂದಿ ಇದ್ದು ಅವರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಅದೇ ಸಮಯಕ್ಕೆ ಅಗ್ನಿಶಾಮಕ ದಳದ (fire brigade) ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಘಟಕಕ್ಕೆ ಹಾನಿ ಸಂಭವಿದೆಯಾದರೂ ಪ್ರಾಣಾಪಾಯವೇನೂ ಅಗಿಲ್ಲ.