25 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೋಲಾರದ ಯೋಧನಿಗೆ ಸ್ವಗ್ರಾಮದಲ್ಲಿ ಅದ್ದೂರಿ ಸ್ವಾಗತ

25 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೋಲಾರದ ಯೋಧನಿಗೆ ಸ್ವಗ್ರಾಮದಲ್ಲಿ ಅದ್ದೂರಿ ಸ್ವಾಗತ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 08, 2022 | 12:36 PM

ಕಾಲು ಶತಮಾನದವರೆಗೆ ದೇಶದ ಬೇರೆ ಬೇರೆ ರಾಜ್ಯಗಳ ಗಡಿಭಾಗದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ್ದು ಬಹಳ ಸಂತೋಷ ತಂದಿದೆ ಮತ್ತು ಅಭಿಮಾನ ಮೂಡಿಸಿದೆ ಎಂದು ನಾಗೇಶ ಹೇಳಿದರು.

ಕೋಲಾರ:  ಗಡಿ ಭದ್ರತಾ ದಳದಲ್ಲಿ (Border Security Force) 25 ವರ್ಷಗಳ ಕಾಲ ನಿಸ್ವಾರ್ಥ ಮತ್ತು ಸಮರ್ಪಣಾ ಮನೋಭಾವದೊಂದಿಗೆ ಸೇವೆ ಸಲ್ಲಿಸಿ ಮೊನ್ನೆಯಷ್ಟೇ ನಿವೃತ್ತಿ ಹೊಂದಿ ವಾಪಸ್ಸಾದ ಕೋಲಾರ ಜಿಲ್ಲೆ ಬಂಗಾರಪೇಟೆ ಬೂದಿಕೋಟೆ ಗ್ರಾಮದ ನಾಗೇಶ್ (Nagesh) ಅವರನ್ನು ಬಂಗಾರಪೇಟೆ ಪಟ್ಟಣದಲ್ಲಿ ಅದ್ದೂರಿಯಿಂದ ಬರಮಾಡಿಕೊಳ್ಳಲಾಯಿತು. ಸಾರ್ವಜನಿಕರು ಯೋಧನಿಗೆ ಭಾರಿಗಾತ್ರದ ಹೂಮಾಲೆಗಳನ್ನು (garlands) ಅವರನ್ನು ಸತ್ಕರಿಸಿದರು. ಕಾಲು ಶತಮಾನದವರೆಗೆ ದೇಶದ ಬೇರೆ ಬೇರೆ ರಾಜ್ಯಗಳ ಗಡಿಭಾಗದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ್ದು ಬಹಳ ಸಂತೋಷ ತಂದಿದೆ ಮತ್ತು ಅಭಿಮಾನ ಮೂಡಿಸಿದೆ, ತಮ್ಮ ಸ್ವಗ್ರಾಮ ಬೂದಿಕೋಟೆ ಗ್ರಾಮದಲ್ಲೂ ಜನ ಅದ್ದೂರಿಯ ಸತ್ಕಾರ ಸಮಾರಂಭ ಏರ್ಪಡಿಸಿದ್ದಾರೆ ಎಂದು ನಾಗೇಶ ಹೇಳಿದರು.