ರಿಷಬ್ ಶೆಟ್ಟಿಗೆ ಹಿರಿಯರನ್ನು ಕಂಡರೆ ಎಷ್ಟು ಗೌರವ ನೋಡಿ

Updated on: Nov 22, 2025 | 2:16 PM

ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರಿಗೆ ಎಲ್ಲ ಸಾಕಷ್ಟು ಜನಪ್ರಿಯತೆ ಇದೆ. ಅವರಿಗೆ ಹಿರಿಯರನ್ನು ಕಂಡರೆ ತುಂಬಾನೇ ಗೌರವ. ಅದನ್ನು ತೋರಿಸುವ ರೀತಿಯಲ್ಲಿ ಈ ವಿಡಿಯೋ ಇದೆ. ಆ ಬಗ್ಗೆ ಇಲ್ಲಿ ಇದೆ ವಿವರ.

ದೈವ ನರ್ತಕ ಉಮೇಶ್ ಪಂಬದರಿಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ  ಮಂಗಳೂರಿನಲ್ಲಿ ಅವರಿಗೆ ಸಾರ್ವಜನಿಕವಾಗಿ ಸನ್ಮಾನ ಮಾಡಲಾಗಿದೆ. ಗೌರವ ‌ಸನ್ಮಾನ‌ ಕಾರ್ಯಕ್ರಮದಲ್ಲಿ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಭಾಗಿ ಆಗಿದ್ದರು. ಅವರು ವೇದಿಕೆ ಏರುತ್ತಿದ್ದಂತೆ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ‘ಕಾಂತಾರ ಚಾಪ್ಟರ್ 1’ ಹಿಟ್ ಆದರೂ ಅವರು ತಗ್ಗಿ-ಬಗ್ಗಿಯೇ ನಡೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.