ರಿಷಬ್ ಶೆಟ್ಟಿ ಹೀಗೆ ಇರೋದು ಏಕೆ? ವಿವರಿಸಿದ ಪ್ರಮೋದ್ ಶೆಟ್ಟಿ
ರಿಷಬ್ ಅವರು ಹೊಸಬರ ತಂಡಕ್ಕೆ ಬೆಂಬಲ ಕೊಡೋದು ನಿಲ್ಲಿಸಿಲ್ಲ. ಅವರು ಎಲ್ಲಿಯೂ ಧಿಮಾಕಿನ ಮಾತನ್ನು ಆಡಿಲ್ಲ. ದೊಡ್ಡ ಗೆಲುವು ಸಿಕ್ಕರೂ ಬದಲಾಗಿಲ್ಲ. ಹೀಗೇಕೆ ಎನ್ನುವ ಬಗ್ಗೆ ಪ್ರಮೋದ್ ಶೆಟ್ಟಿ ಅವರು ಮಾತನಾಡಿದ್ದಾರೆ.
ರಿಷಬ್ ಶೆಟ್ಟಿ ಅವರು ‘ಕಾಂತಾರ’ ಚಿತ್ರದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾದಿಂದ ಅವರಿಗೆ ಯಶಸ್ಸು ಸಿಕ್ಕಿದೆ. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. ಆದಾಗ್ಯೂ ರಿಷಬ್ ಅವರು ಹೊಸಬರ ತಂಡಕ್ಕೆ ಬೆಂಬಲ ಕೊಡೋದು ನಿಲ್ಲಿಸಿಲ್ಲ. ಅವರ ನಿರ್ಮಾಣದ ‘ಲಾಫಿಂಗ್ ಬುದ್ಧ’ ಸಿನಿಮಾ ಆಗಸ್ಟ್ 30ರಂದು ರಿಲೀಸ್ ಆಗಲಿದೆ. ಇದರ ಪ್ರಚಾರದಲ್ಲಿ ಪ್ರಮೋದ್ ಭಾಗಿ ಆಗುತ್ತಿದ್ದಾರೆ. ಅವರು ರಿಷಬ್ ಬಗ್ಗೆ ಮಾತನಾಡಿದ್ದಾರೆ. ‘ರಿಷಬ್ ಸೋಲನ್ನು, ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುತ್ತಾನೆ. ಅದಕ್ಕೆ ಅವನು ಮೇಲಕ್ಕೂ ಹೋಗಲ್ಲ, ಕೆಳಕ್ಕೂ ಇಳಿಯಲ್ಲ. ಹೋಟೆಲ್ ಬಿಸ್ನೆಸ್ ಮಾಡೋದು ಬೇಡ ಎಂದರೂ ಮಾಡಿ ಕೈ ಸುಟ್ಟುಕೊಂಡ. ನೀರಿನ ಬಿಸ್ನೆಸ್ ಚೆನ್ನಾಗಿಯೇ ನಡೆಯುತ್ತಿತ್ತು. ಸಿನಿಮಾಗಾಗಿ ಅದನ್ನು ಮಾರಿದ್ದ’ ಎಂದಿದ್ದಾರೆ ಪ್ರಮೋದ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.