Dasara Mahotsav 2024: ಅರಣ್ಯಭವನದಿಂದ ಅರಮನೆಯತ್ತ ಹೊರಟ ಅಭಿಮನ್ಯು ನೇತೃತ್ವದ ಗಜಪಡೆ!
Dasara Mahotsav 2024: ಅರಣ್ಯಭವನದ ಆವರಣದಿಂದ ಅರಮನೆಗೆ ಕರೆದೊಯ್ಯುವ ಮೊದಲು ಆನೆಗಳನ್ನು ಬಣ್ಣಬಣ್ಣದ ಹೊದಿಕೆಗಳೊಂದಿಗೆ ಸಿಂಗರಿಸಲಾಯಿತು. ವಾದ್ಯಮೇಳದವರೂ ಸಾಂಪ್ರದಾಯಿಕ ಉಡುಗೆಯಲ್ಲಿದ್ದರು. ಸರ್ವಾಲಂಕೃತಗೊಂಡ ಅಭಿಮನ್ಯು ನೇತೃತ್ವದ ಆನೆಗಳು ನಗರದ ರಾಜಬೀದಿಗಳ ಮೂಲಕ ಅರಮನೆಯತ್ತ ನಡೆದು ಹೋಗುತ್ತಿರುವುದನ್ನು ಜನ ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ನೋಡಿದರು.
ಮೈಸೂರು: ವೀರನಹೊಸಹಳ್ಳಿಯಿಂದ ಮೈಸೂರಿಗೆ ಆಗಮಿಸಿ ನಗರದ ಅರಣ್ಯಭವನದ ಆವರಣದಲ್ಲಿ ಎರಡು ದಿನ ವಿಶ್ರಮಿಸಿದ ಅಭಿಮನ್ಯು ನೇತೃತ್ವದ ಆನೆಗಳು ಇವತ್ತು ಬೆಳಗ್ಗೆ ಅರಮನೆಯತ್ತ ಹೊರಟಿವೆ. ಅನೆಗಳನ್ನು ಕಾಲ್ನಡಿಗೆಯಲ್ಲಿ ಅರಮನೆಗೆ ಕರೆದೊಯ್ಯುವ ಅವುಗಳಿಗೆ ಬಲು ಇಷ್ಟವಾದ ಕೊಬ್ಬರಿ, ಬೆಲ್ಲ, ಕಲ್ಲುಸಕ್ಕರೆ, ಕಬ್ಬು ಮತ್ತು ವಿವಿಧ ಬಗೆಯ ಹಣ್ಣುಗಳನ್ನಿಟ್ಟು ದಸರಾ ಉತ್ಸವ ನಿರ್ವಿಘ್ನವಾಗಿ ನಡೆಯಲು ನಾಡದೇವತೆ ಚಾಮುಂಡೇಶ್ವರಿ ಮತ್ತು ವಿನಾಯಕನಿಗೆ ಪೂಜೆ ಸಲ್ಲಿಸಲಾಯಿತು. ಪೂಜೆ ಕೈಂಕರ್ಯಗಳು ಅರ್ಚಕ ಪ್ರಹ್ಲಾದ್ ನೇತೃತ್ವದಲ್ಲಿ ನಡೆದವು. ಹೂವು ಹಣ್ಣುಗಳ ಜೊತೆ ಚಕ್ಕುಲಿ, ಪುರಿಉಂಡೆ, ಕಜ್ಜಾಯ ಮತ್ತು ಇತರ ಧಾನ್ಯಗಳನ್ನಿಟ್ಟು ಆನೆಗಳಿಗೆ ನೈವೇದ್ಯ ಸಲ್ಲಿಸಲಾಯಿತು. ಅಭಿಮನ್ಯು ಸೇರಿದಂತೆ, ಭೀಮ, ಗೋಪಿ, ಧನಂಜಯ, ಕಂಜನ್, ರೋಹಿತ್, ಲಕ್ಷ್ಮೀ, ವರಲಕ್ಷ್ಮೀ, ಏಕಲವ್ಯ ಹೆಸರಿನ ಅನೆಗಳು ನಗರದ ರಸ್ತೆಗಳ ಮೂಲಕ ಅರಮನೆಯತ್ತ ಸಾಗುತ್ತಿರುವ ದೃಶ್ಯವನ್ನು ಇಲ್ಲಿ ನೋಡಬಹುದು. ನಗರದ ಅಶೋಕಪುರಂ, ಬಲ್ಲಾಳ್ ಸರ್ಕಲ್, ರಾಮಸ್ವಾಮಿ ಸರ್ಕಲ್, ಚಾಮರಾಜ ಜೋಡಿ ರಸ್ತೆಯ ಮೂಲಕ ಅನೆಗಳು ಎಂದಿನ ಗಾಂಭೀರ್ಯದೊಂದಿಗೆ ಅರಮೆನೆಯತ್ತ ಸಾಗಿದವು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗಜಪಡೆಯ ಆಗಮನದೊಂದಿಗೆ ಮೈಸೂರಲ್ಲಿ ಶುರುವಾದ ದಸರಾ ಮಹೋತ್ಸವ-2024 ಕಲರವ
Published On - 10:46 am, Fri, 23 August 24