Nithya Bhavishya: ಶ್ರಾವಣ ಮಾಸದ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಶ್ರಾವಣ ಮಾಸದ ಮೂರನೇ ಶುಕ್ರವಾರದಂದು ಗ್ರಹಗಳ ಸಂಚಾರ ಹೇಗಿದೆ? ಇಂದು ದ್ವಾದಶ ರಾಶಿಗಳ ಪ್ರಭಾವ ಬೀರುತ್ತವೆಯಾ? ಎಂಬೆಲ್ಲ ವಿಚಾರಗಳ ಬಗ್ಗೆ ಬಸವರಾಜ ಗುರೂಜಿ ತಿಳಿಸಿದ್ದಾರೆ. ಆಗಸ್ಟ್ 23 ಶುಕ್ರವಾರದ ಇಂದಿನ ರಾಶಿ ಭವಿಷ್ಯ ತಿಳಿಯಿರಿ.
ಹಿಂದೂ ಧರ್ಮದ ಪ್ರಕಾರ ಶ್ರಾವಣ ಮಾಸ ಶ್ರೇಷ್ಠವಾದ ತಿಂಗಳು. ಶುಭ ಕಾರ್ಯಗಳಿಗೆ ಸೂಕ್ತವಾಬ ತಿಂಗಳು. ಈ ತಿಂಗಳಲ್ಲಿ ಯಾವುದೇ ಕಾರ್ಯ ಕೈಗೊಂಡರು ಯಶಸ್ಸು ಕಾಣುತ್ತೇವೆ ಅಂತ ಹೇಳಲಾಗುತ್ತದೆ. ಇಂದು ಶ್ರಾವಣ ಮಾಸದ ಮೂರನೇ ಶುಕ್ರವಾರ. ಕಳೆದ ವಾರ ಶುಕ್ರವಾರದಂದು ವರ ಮಹಾಲಕ್ಷ್ಮಿ ಹಬ್ಬ ಆಚರಿಸಲು ಸಾಧ್ಯವಾಗದೆ ಇದ್ದವರು, ಈ ಶಕ್ರವಾರ ಆಚರಿಸಬಹುದಾಗಿದೆ. ಈ ಶುಕ್ರವಾರದ ಗ್ರಹಗಳ ಸಂಚಾರ ಹೇಗಿದೆ? ಶುಭ, ಅಶುಭಗಳ ಬಗ್ಗೆ, ಇಂದಿನ (ಆಗಸ್ಟ್ 23) ರಾಶಿ ಭವಿಷ್ಯವೇನು? ಈ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ. ವಿಡಿಯೋ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ರೇವತೀ, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:49 ಗಂಟೆ, ರಾಹು ಕಾಲ ಬೆಳಿಗ್ಗೆ 11:02 ರಿಂದ ಮಧ್ಯಾಹ್ನ 12:35, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ ಸಂಜೆ 05:16ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:28ರ ವರೆಗೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ