ಭಯ ಹುಟ್ಟಿಸುವಂತೆ ಉಕ್ಕಿ ಹರಿಯುತ್ತಿದ್ದಾಳೆ ಕೃಷ್ಣೆ, ನದಿಪಾತ್ರ ಜನರಲ್ಲಿ ಪ್ರವಾಹದ ಭೀತಿ

|

Updated on: Jul 24, 2024 | 10:26 AM

ಕಳೆದ ಮಾನ್ಸೂನ್ ಸೀಸನಲ್ಲಿ ಕೊರತೆ ಮಳೆಯಿಂದ ರಾಜ್ಯ ಭೀಕರ ಬರಗಾಲಕ್ಕೀಡಾಗಿತ್ತು. ಆದರೆ ಈ ಬಾರಿ ರಾಜ್ಯದ ಎಲ್ಲ ಪ್ರಾಂತ್ಯಗಳಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿ ಸಾಮಾನ್ಯ ಜನಜೀವನ ಪ್ರಭಾವಕ್ಕೊಳಗಾಗಿದೆ. ಒಮ್ಮೆ ಅನಾವೃಷ್ಟಿ ಮತ್ತೊಮ್ಮೆ ಅತಿವೃಷ್ಟಿ, ಇದೇ ನಿಸರ್ಗದ ವೈಚಿತ್ರ್ಯ!

ರಾಯಚೂರು: ಕೃಷ್ಣೆಯ ಆರ್ಭಟ ನೋಡಿ ಹೆದರಿಕೆಯಾಗೋದು ಸಹಜವೇ. ಹಾಗೆ ನೋಡಿದರೆ ರಾಜ್ಯದ ಎಲ್ಲ ನದಿಗಳಂತೆ ಕೃಷ್ಣಾ ನದಿ ಸಹ ತುಂಬಿ ಹರಿಯುತಿತ್ತು. ಅದರೆ ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯದಿಂದ 1,80,000 ಕ್ಯೂಸೆಕ್ಸ್ ನೀರನ್ನು ಕೃಷ್ಣೆಗೆ ಬಿಡುಗಡೆ ಮಾಡಿರುವ ಕಾರಣ ಅದು ಉಕ್ಕಿ ಹರಿಯುತ್ತಿದೆ. ನಿಮಗೆ ದೃಶ್ಯಗಳಲ್ಲಿ ಕಾಣುತ್ತಿರೋದು ಲಿಂಗಸೂಗೂರು ತಾಲ್ಲೂಕಿನ ಶೀಲಹಳ್ಳಿಯಲ್ಲಿರುವ ಸೇತುವೆ. ಇದು ಸಂಪೂರ್ಣವಾಗಿ ಮುಳುಗಡೆಯಾಗಿದೆ ಮತ್ತು ಸೇತುವೆ ಮೇಲಿಂದ ನೀರು ರಭಸವಾಗಿ ಹರಿಯುತ್ತಿದೆ. ನಮ್ಮ ರಾಯಚೂರು ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಲಿಂಗಸೂಸೂರು ತಾಲ್ಲೂಕಿನ ಯರಗೋಡಿ, ಯಳಗುಂದಿ, ಕಡದರಗಡ್ಡಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಟ್ ಆಗಿದೆ. ನದಿ ಪಾತ್ರದಲ್ಲಿನ ರೈತರು ತಮ್ಮ ಹೊಲಗದ್ದೆಗಳಲ್ಲಿ ಅಳವಡಿಸಿಕೊಂಡಿದ್ದ ಪಂಪ್ ಸೆಟ್ ಗಳು ನೀರನಲ್ಲಿ ಮುಳುಗಿವೆ. ಮಳೆ ಸುರಿಯುವುದು ಮುಂದುವರಿಯಲಿರುವ ಕಾರಣ ನದಿಪಾತ್ರದ ಜನ ಪ್ರವಾಹದ ಭಯದಲ್ಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ; ಚಾಮರಾಜನಗರದ 12 ಗ್ರಾಮಗಳಿಗೆ ಪ್ರವಾಹ ಭೀತಿ