ಶಿಕ್ಷಣ ಪಡೆದ ವಿಶ್ವ ವಿದ್ಯಾನಿಲಯದಲ್ಲೇ ರಾಕಿಂಗ್ ಸ್ಟಾರ್ ಯಶ್ಗೆ ಸನ್ಮಾನ
ಯಶ್ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ಮೈಸೂರಿನಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮಕ್ಕೆ ಯಶ್ ಅತಿಥಿಯಾಗಿ ಆಗಮಿಸಿದ್ದರು.
ನಟ ರಾಕಿಂಗ್ ಸ್ಟಾರ್ ಯಶ್ (Yash) ಅವರು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ಈಗ ಅವರ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ಮೈಸೂರಿನಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮಕ್ಕೆ ಯಶ್ ಅತಿಥಿಯಾಗಿ ಆಗಮಿಸಿದ್ದರು. ಅವರನ್ನು ನೋಡೋಕೆ ಜನಸಾಗರವೇ ಸೇರಿತ್ತು. ಯಶ್ ಅವರಿಗೆ ವೇದಿಕೆ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸನ್ಮಾನ ಮಾಡಿದರು.