Gaalipata 2: ‘ಯೋಗರಾಜ್ ಭಟ್ರು ಒಳ್ಳೆ ಸೆಂಟಿಮೆಂಟ್ ಇಟ್ಟಿದಾರೆ’: ‘ಗಾಳಿಪಟ 2’ ಫಸ್ಟ್ ಶೋ ನೋಡಿದ ಫ್ಯಾನ್ಸ್ ವಿಮರ್ಶೆ
Gaalipata 2 Public Review: ಗಣೇಶ್, ದಿಗಂತ್, ಪವನ್ ಕುಮಾರ್ ಹೇಳಿರುವ ಸ್ನೇಹ ಮತ್ತು ಪ್ರೀತಿಯ ಕಥೆ ಜನರಿಗೆ ಇಷ್ಟ ಆಗಿದೆ. ‘ಗಾಳಿಪಟ 2’ ಚಿತ್ರ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಭಾರಿ ನಿರೀಕ್ಷೆ ಮೂಡಿಸಿದ್ದ ‘ಗಾಳಿಪಟ 2’ (Gaalipata 2) ಚಿತ್ರ ಇಂದು (ಆಗಸ್ಟ್ 12) ತೆರೆಕಂಡಿದೆ. ಯೋಗರಾಜ್ ಭಟ್ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ. ಆಗಸ್ಟ್ 11ರ ರಾತ್ರಿಯೇ ಕೆಲವೆಡೆ ಫ್ಯಾನ್ಸ್ ಶೋ ನಡೆದಿದೆ. ಎಲ್ಲರಿಗಿಂತ ಮುನ್ನ ಸಿನಿಮಾ ನೋಡಿ ಅಭಿಮಾನಿಗಳು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಯೋಗರಾಜ್ ಭಟ್ರು ಒಳ್ಳೆ ಸೆಂಟಿಮೆಂಟ್ ಇಟ್ಟಿದಾರೆ’, ‘ಕೊಟ್ಟ ಕಾಸಿಗೆ ಮೋಸ ಇಲ್ಲ’, ‘ದಿಗಂತ್ ಕಾಮಿಡಿ ತುಂಬ ಚೆನ್ನಾಗಿದೆ’, ‘ಮೊದಲ ಪಾರ್ಟ್ಗೆ ಹೋಲಿಕೆ ಮಾಡದೇ ನೋಡಬೇಕು’ ಎಂಬಿತ್ಯಾದಿ ಅಭಿಪ್ರಾಯ (Gaalipata 2 Public Review) ಕೇಳಿಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Aug 12, 2022 08:23 AM
Latest Videos