ದರ್ಶನ್​ನ ಹಾಡಿ ಹೊಗಳಿದ ರಾಕ್​ಲೈನ್​ ವೆಂಕಟೇಶ್​; ಒಪ್ಪಿಕೊಳ್ಳಲೇ ಇಲ್ಲ ಚಾಲೆಂಜಿಂಗ್ ಸ್ಟಾರ್

Updated on: May 03, 2024 | 8:11 AM

ದರ್ಶನ್​ ಅವರು ‘ಕಾಟೇರ’ ಸಿನಿಮಾದಿಂದ ಭರ್ಜರಿ ಯಶಸ್ಸು ಕಂಡರು. ಅವರ ಜೊತೆಗೆ ಚಿತ್ರತಂಡದಲ್ಲಿ ಕೆಲಸ ಮಾಡಿದ ಅನೇಕರಿಗೆ ಗೆಲುವು ಸಿಕ್ಕಿತು. ಈ ಸಿನಿಮಾದ ಪರದೆ ಹಿಂದೆ ಕೆಲಸ ಮಾಡಿದ ತಂತ್ರಜ್ಞರ ಬೆನ್ನುತಟ್ಟುವ ಕೆಲಸ ಇಂದು ಆಗಿದೆ. ಈ ವೇಳೆ ರಾಕ್​ಲೈನ್ ಅವರು ದರ್ಶನ್ ಬಗ್ಗೆ ಮೆಚ್ಚುಗೆ ಸೂಚಿಸಿದರು.

ನಟ ದರ್ಶನ್ (Darshan) ಹಾಗೂ ರಾಕ್​ಲೈನ್ ವೆಂಕಟೇಶ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇವರು ಒಟ್ಟಾಗಿ ಕೆಲಸ ಮಾಡಿದ ‘ಕಾಟೇರ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರವನ್ನು ಜನರು ಮೆಚ್ಚಿಕೊಂಡರು. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಸಿನಿಮಾದಿಂದ ನಿರ್ಮಾಪಕರಿಗೆ ಲಾಭ ಆಗಿದೆ. ಹೀಗಾಗಿ, ಈ ಚಿತ್ರಕ್ಕೆ ಕಥೆ ಬರೆದ ಜಡೇಶ್​ ಕುಮಾರ್​, ಸಂಭಾಷಣೆ ಬರೆದ ಮಾಸ್ತಿ ಹಾಗೂ ನಟ ಸೂರಜ್​ ಅವರಿಗೆ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ (Rockline Venkatesh) ಅವರು ಹೊಸ ಕಾರು ಕೊಡಿಸಿದ್ದಾರೆ. ಈ ವೇಳೆ ದರ್ಶನ್ ಅವರನ್ನು ರಾಕ್​​ಲೈನ್ ಹೊಗಳಿದ್ದಾರೆ. ‘ಈ ಸಿನಿಮಾ ಹಿಟ್ ಆಗಲು ದರ್ಶನ್ ಕೂಡ ಕಾರಣ. ಅವರ ಪಾತ್ರ ಉತ್ತಮವಾಗಿತ್ತು. ಅದನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸಿದ್ದಾರೆ’ ಎಂದು ರಾಕ್​ಲೈನ್ ಹೇಳಿದ್ದಾರೆ. ಆದರೆ, ಈ ಹೊಗಳಿಕೆಯನ್ನು ಸ್ವೀಕರಿಸಲು ದರ್ಶನ್ ರೆಡಿ ಇರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More