ಡಿ ರೂಪಾ-ಗಂಗರಾಜು ಸಂಬಾಷಣೆಯ ಆಡಿಯೋ ಕ್ಲಿಪ್ ಅಸ್ತ್ರವಾಗಿ ಬಳಸಿಕೊಳ್ಳಲು ರೋಹಿಣಿ ಸಿಂಧೂರಿ ಸಿದ್ಧರಿಲ್ಲ!
ರೂಪಾ ವಿರುದ್ಧ ಮಾತಾಡಲು ಅವರಿಗೆ ಅಸ್ತ್ರ ಸಿಕ್ಕಂತಾದರೂ ರೋಹಿಣಿಗೆ ಅದರಿಂದ ಸಂತೋಷವೇನೂ ಆಗಿಲ್ಲ.
ಬೆಂಗಳೂರು: ಮೈಸೂರಿನ ಸಾಮಾಜಿಕ ಕಾರ್ಯಕರ್ತ ಗಂಗರಾಜು (Gangaraju) ತನ್ನ ಹಾಗೂ ಡಿ ರೂಪಾ ಮೌದ್ಗೀಲ್ ನಡುವೆ ನಡೆದ ಸಂಭಾಷಣೆಯನ್ನು (conversation) ಆಡಿಯೋ ಕ್ಲಿಪ್ ಬಹಿರಂಗಗೊಳಿಸುತ್ತಿದ್ದಂತೆಯೇ ರೋಹಿಣಿ ಸಿಂಧೂರಿ ಮುಖದಲ್ಲಿ ಸ್ವಲ್ಲ ಗೆಲುವು, ಮಂದಹಾಸ ಕಾಣಿಸಬೇಕಿತ್ತು. ರೂಪಾ ವಿರುದ್ಧ ಮಾತಾಡಲು ಅವರಿಗೆ ಅಸ್ತ್ರ ಸಿಕ್ಕಂತಾದರೂ ರೋಹಿಣಿಗೆ ಅದರಿಂದ ಸಂತೋಷವೇನೂ ಆಗಿಲ್ಲ. ಇಂದು ಬೆಳಗ್ಗೆ ಅವರು ಕಚೇರಿಗೆ ಹೊರಡಲು ಮನೆಯಿಂದ ಹೊರಬಿದ್ದಾಗ, ಮಾಧ್ಯಮ ಪ್ರತಿನಿಧಿಗಳು (media persons) ಅವರು ಪ್ರತಿಕ್ರಿಯೆ ಕೇಳಲು ದುಂಬಾಲು ಬೀಳುತ್ತಾರೆ. ಆದರೆ ರೋಹಿಣಿ ಮಾತ್ರ ಏನನ್ನೂ ರಿಯಾಕ್ಟ್ ಮಾಡದೆ ತಮ್ಮ ಕಾರು ಹತ್ತಿ ಹೊರಟು ಬಿಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ