ಸಿಟಿ ರವಿ ಭಟ್ಕಳಕ್ಕೆ ಭೇಟಿ ನೀಡಿದಾಗ ಮಾಂಸದೂಟ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದರು: ಕಾರವಾರ ಕಾಂಗ್ರೆಸ್ ಕಾರ್ಯಕರ್ತ
ಹಿಂದೆ ಸಿದ್ದರಾಮಯ್ಯನವರು ಬಾಡೂಟ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದರು ಎಂದು ದೊಡ್ಡ ವಿವಾದ ಸೃಷ್ಟಿಸಿದ್ದ ಬಿಜೆಪಿ ಕಾರ್ಯಕರ್ತರು ಈಗ ಮೌನವಾಗಿರೋದು ಯಾಕೆ ಅಂತ ಶೆಟ್ಟಿ ಪ್ರಶ್ನಿಸಿದ್ದಾರೆ.
ಕಾರವಾರ: ಬಿಜೆಪಿ ಶಾಸಕ ಸಿಟಿ ರವಿ (CT Ravi) ಇದ್ದಲ್ಲಿ ವಿವಾದವಿರೋದು ಇತ್ತೀಚಿಗೆ ಸಾಮಾನ್ಯವಾಗಿ ಬಿಟ್ಟಿದೆ ಮಾರಾಯ್ರೇ. ಕಾರವಾರ ಜಿಲ್ಲೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಶಂಬಿ ಶೆಟ್ಟಿಯವರು (Shambi Shetty) ಹೇಳುತ್ತಿರುವ ಪ್ರಕಾರ ಇತ್ತೀಚಿಗೆ ಸಿಟಿ ರವಿಯವರು ಮಾಂಸದೂಟ ಸೇವಿಸಿ ಕಾರವಾರದಲ್ಲಿರುವ ಹಿಂದೂ ದೇವಸ್ಥಾನವೊಂದಕ್ಕೆ ಹೋಗಿದ್ದರು. ರವಿ ಕಾರವಾರ ಜಿಲ್ಲೆಯ ಭಟ್ಕಳಕ್ಕೆ ಬಂದಾಗ ಅಲ್ಲಿನ ಶಾಸಕ ಸುನೀಲ್ ನಾಯಕ್ ಅವರ ಮನೆಯಲ್ಲಿ ಮೀನುಸಾರಿನ ಊಟಮಾಡಿದ ಬಳಿಕ ದೇವಸ್ಥಾನಕ್ಕೆ ಹೋಗಿದ್ದರು ಎಂದು ಶೆಟ್ಟಿ ಹೇಳುತ್ತಾರೆ. ಹಿಂದೆ ಸಿದ್ದರಾಮಯ್ಯನವರು (Siddaramaiah) ಬಾಡೂಟ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದರು ಎಂದು ದೊಡ್ಡ ವಿವಾದ ಸೃಷ್ಟಿಸಿದ್ದ ಬಿಜೆಪಿ ಕಾರ್ಯಕರ್ತರು ಈಗ ಅವರದ್ದೇ ಪಕ್ಷದ ಹಿರಿಯ ನಾಯಕನೊಬ್ಬ ಹಾಗೆ ಮಾಡಿರುವಾಗ ಮೌನವಾಗಿರೋದು ಯಾಕೆ ಅಂತ ಪ್ರಶ್ನಿಸುವ ಶೆಟ್ಟಿ ಬಿಜೆಪಿಯವರು ಹೇಳೋದು ಆಚಾರ ತಿನ್ನೋದು ಬದನೆ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

