IND vs NED, ICC World Cup: ಬೆಂಗಳೂರಿಗೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರರು: ರೋಹಿತ್ ಪಡೆಗೆ ಅದ್ಧೂರಿ ಸ್ವಾಗತ

Team India Arrived Bengaluru: ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಬಳಿಕ ಸೋಮವಾರ ಸಂಜೆ ವೇಳೆಗೆ ಕೋಲ್ಕತ್ತಾದಿಂದ ನೇರವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದರು. ಆದರೆ, ವಿರಾಟ್ ಕೊಹ್ಲಿ ಪ್ರತ್ಯೇಕವಾಗಿ ಇವರೆಲ್ಲರಿಗಿಂತ ಮುಂಚೆ ಬೆಂಗಳೂರಿಗೆ ಬಂದಿದ್ದರು.

IND vs NED, ICC World Cup: ಬೆಂಗಳೂರಿಗೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರರು: ರೋಹಿತ್ ಪಡೆಗೆ ಅದ್ಧೂರಿ ಸ್ವಾಗತ
|

Updated on: Nov 07, 2023 | 9:26 AM

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ (ICC ODI World Cup) ಸೆಮಿ ಫೈನಲ್​ಗು ಮುನ್ನ ಭಾರತ ತನ್ನ ಕೊನೆಯ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ನವೆಂಬರ್ 12 ಭಾನುವಾರದಂದು ನೆದರ್ಲೆಂಡ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ. ಇದೀಗ ಈ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಸಿಲಿಕಾನ್ ಸಿಟಿಗೆ ಬಂದಿದ್ದಾರೆ. ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಬಳಿಕ ಸೋಮವಾರ ಸಂಜೆ ವೇಳೆಗೆ ಕೋಲ್ಕತ್ತಾದಿಂದ ನೇರವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದರು. ಆದರೆ, ವಿರಾಟ್ ಕೊಹ್ಲಿ ಪ್ರತ್ಯೇಕವಾಗಿ ಇವರೆಲ್ಲರಿಗಿಂತ ಮುಂಚೆ ಬೆಂಗಳೂರಿಗೆ ಬಂದಿದ್ದರು. ಎಲ್ಲ ಆಟಗಾರರು ಇಂದು ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಇದ್ದು, ನಾಳೆಯಿಂದ ಅಭ್ಯಾಸ ಶುರುಮಾಡಲಿದ್ದಾರೆ. ಟೀಮ್ ಇಂಡಿಯಾ ಪ್ಲೇಯರ್ಸ್​ಗೆ ಏರ್ಪೋರ್ಟ್​ನಲ್ಲಿ ಹೂವಿನ ಹಾರ ಹಾಕಿ ವಿಶೇಷವಾಗಿ ಸ್ವಾಗತಿಸಲಾಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us