ಆರೋಪಿ ರುದ್ರಗೌಡ ಪಾಟೀಲ್ ಸಲೀಸಾಗಿ ಪರಾರಿಯಾಗುತ್ತಿರೋದನ್ನು ಗಮನಿದರೆ ಪೊಲೀಸರ ಚಲನವಲನಗಳ ಬಗ್ಗೆ ಸುಳಿವು ರವಾನೆಯಾಗುತ್ತಿದೆ!

ಆರೋಪಿ ರುದ್ರಗೌಡ ಪಾಟೀಲ್ ಸಲೀಸಾಗಿ ಪರಾರಿಯಾಗುತ್ತಿರೋದನ್ನು ಗಮನಿದರೆ ಪೊಲೀಸರ ಚಲನವಲನಗಳ ಬಗ್ಗೆ ಸುಳಿವು ರವಾನೆಯಾಗುತ್ತಿದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 07, 2023 | 12:01 PM

ಒಂದೇ ಅಪರಾಧವನ್ನು ಪಾಟೀಲ್ ಪದೇಪದೆ ಮಾಡುತ್ತಾನೆಂದರೆ ಅವನಿಗೆ ಕಾನೂನು ಮತ್ತು ಪೊಲೀಸರ ಭಯವಿಲ್ಲ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ತಮ್ಮ ಅಧಿಕಾರಿ ಮತ್ತು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಏನೇ ಹೇಳಿದರೂ ವೈಫಲ್ಯ ಎದ್ದುಕಾಣುತ್ತಿದೆ. ಕೆಇಎ ಪರೀಕ್ಷೆ ನಡೆಯುವಾಗ ಪಾಟೀಲ್ ನನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದಿದ್ದರೆ, ಇದೆಲ್ಲ ಸಂಭವಿಸುತ್ತಿರಲಿಲ್ಲ.

ಕಲಬುರಗಿ: ನಗರದಲ್ಲಿ ಇತ್ತೀಚಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಿವಿಧ ಹುದ್ದೆಗಳಿಗಾಗಿ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಅಕ್ರಮದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಈ ಪ್ರಕರಣದಲ್ಲೂ ಕಿಂಗ್ಪಿನ್ (kingpin) ಅಂತ ಆರೋಪಕ್ಕೊಳಗಾಗಿರುವ ಕಲಬುರಗಿಯ ಹಳೆಯ ಆರೋಪಿ ರುದ್ರಗೌಡ ಪಾಟೀಲ್ (Rudragowda Patil) ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಅವನ ವಿರುದ್ಧ ಪ್ರಕರಣ ದಾಖಲಾದ ಬಳಿಕ ಪೊಲೀಸರು ಅವನನ್ನು ಬಂಧಿಸಲು ಹೋಗಲಿರುವ ಸುಳಿವು ಪಡೆದ ಪಾಟೀಲ್ ಮುಚ್ಚಿದ ಗೇಟಿನ ಕಂಪೌಂಡ್ ಹಾರಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ವಾಸ್ತವ ಸಂಗತಿಯೆಂದರೆ ಕಳೆದ ವರ್ಷ ನಡೆದ ಪಿಎಸ್ ಐ ನೇಮಕಾತಿ ಹಗರಣದ (Psi recruitment scam) ರೂವಾರಿ ಇದೇ ಪಾಟೀಲ್ ಅಗಿದ್ದ ಮತ್ತು ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರಬಂದಿದ್ದ. ಒಂದೇ ಅಪರಾಧವನ್ನು ಪಾಟೀಲ್ ಪದೇಪದೆ ಮಾಡುತ್ತಾನೆಂದರೆ ಅವನಿಗೆ ಕಾನೂನು ಮತ್ತು ಪೊಲೀಸರ ಭಯವಿಲ್ಲ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ತಮ್ಮ ಅಧಿಕಾರಿ ಮತ್ತು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಏನೇ ಹೇಳಿದರೂ ವೈಫಲ್ಯ ಎದ್ದುಕಾಣುತ್ತಿದೆ. ಕೆಇಎ ಪರೀಕ್ಷೆ ನಡೆಯುವಾಗ ಪಾಟೀಲ್ ನನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದಿದ್ದರೆ, ಇದೆಲ್ಲ ಸಂಭವಿಸುತ್ತಿರಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 07, 2023 12:00 PM