IND vs SA, ICC World Cup: ಮೆಡಲ್ ಸಿಕ್ಕಿದ್ದು ರೋಹಿತ್​ಗೆ: ಎದ್ದು-ಬಿದ್ದು ಸಂಭ್ರಮಿಸಿದ್ದು ಗಿಲ್-ಕಿಶನ್: ವಿಡಿಯೋ ನೋಡಿ

|

Updated on: Nov 06, 2023 | 10:47 AM

Rohit Sharma won the best fielder medal : ಭಾನುವಾರ ಆಫ್ರಿಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಅತ್ಯುತ್ತಮ ಫೀಲ್ಡರ್‌ ಪ್ರಶಸ್ತಿ ರೋಹಿತ್ ಶರ್ಮಾ ಅವರಿಗೆ ಒಲಿದಿದೆ. ರೋಹಿತ್​ಗೆ ಪದಕದ ಘೋಷಣೆ ಆದ ತಕ್ಷಣ ಎಲ್ಲ ಆಟಗಾರರು ಅವರನ್ನು ತಬ್ಬಿಕೊಂಡರು. ಅದರಲ್ಲೂ ಶುಭ್​ಮನ್ ಗಿಲ್ ಮತ್ತು ಇಶಾನ್ ಕಿಶನ್ ಏನು ಮಾಡಿದರು ನೋಡಿ.

ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ (India vs South Africa) 243 ರನ್​ಗಳ ಅಮೋಘ ಜಯ ಸಾಧಿಸಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದೆ. ಪ್ರತಿ ಬಾರಿ ಪಂದ್ಯ ಮುಗಿದ ಬಳಿಕ ಭಾರತೀಯ ಡ್ರೆಸ್ಸಿಂಗ್ ರೂಮ್​ನಲ್ಲಿ ಅತ್ಯುತ್ತಮ ಫೀಲ್ಡರ್ ಎಂಬ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದು ಈ ಬಾರಿಯ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಯೋಜಿಸಿರುವ ಹೊಸ ಪದ್ಧತಿ. ಅದರಂತೆ ಭಾನುವಾರ ಆಫ್ರಿಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಅತ್ಯುತ್ತಮ ಫೀಲ್ಡರ್‌ ಪ್ರಶಸ್ತಿ ರೋಹಿತ್ ಶರ್ಮಾ ಅವರಿಗೆ ಒಲಿದಿದೆ. ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಈ ವಿಭಾಗದಲ್ಲಿ ಈಗಾಗಲೇ ಪ್ರಶಸ್ತಿ ಗೆದ್ದಿದ್ದಾರೆ. ಇದೀಗ ಭಾರತೀಯ ನಾಯಕ ರೋಹಿತ್ ಶರ್ಮಾ ಅವರಿಗೆ ಪದಕ ಒಲಿದಿದೆ. ರೋಹಿತ್​ಗೆ ಪದಕದ ಘೋಷಣೆ ಆದ ತಕ್ಷಣ ಎಲ್ಲ ಆಟಗಾರರು ಅವರನ್ನು ತಬ್ಬಿಕೊಂಡರು. ಅದರಲ್ಲೂ ಶುಭ್​ಮನ್ ಗಿಲ್ ಮತ್ತು ಇಶಾನ್ ಕಿಶನ್ ರೋಹಿತ್ ಅವರ ಮೇಲೆ ಬಿದ್ದು ವಿಶೇಷವಾಗಿ ಸಂಭ್ರಮಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ