ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮಹಾನ್ ನಾಯಕರ ಪಾತ್ರದ ಬಗ್ಗೆ ಚರ್ಚೆಯಾಗಬೇಕು: ಹೆಚ್ ಡಿ ಕುಮಾರಸ್ವಾಮಿ

|

Updated on: Apr 30, 2024 | 1:16 PM

ಆದರೆ ಮಹಿಳೆಯರ ಬದುಕನ್ನ ಬೀದಿಗೆ ತಂದಿದ್ದಾರೆ ಎಂದು ಕುಮಾರಸ್ವಾಮಿ ಮಾಡುವ ಆರೋಪ ಅರ್ಥವಾಗುವುದಿಲ್ಲ. ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಮತ್ತು ಪೆನ್ ಡ್ರೈವ್ ಗಳನ್ನು ನೋಡಿದರೆ ಪ್ರಜ್ವಲ್ ರೇವಣ್ಣನೇ ವಿಡಿಯೋ ಮಾಡಿರುವುದು ಸ್ಪಷ್ಟವಾಗುತ್ತದೆ, ಹಿಡನ್ ಕೆಮೆರಾದ ಪಾತ್ರವೇನೂ ಕಾಣದು, ಯಾವ ಆಧಾರದಲ್ಲಿ ಕುಮಾರಸ್ವಾಮಿ ಅರೋಪ ಮಾಡುತ್ತಿದ್ದಾರೆಯೋ?

ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy), ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ದೂರಿದರು. ಪ್ರಜ್ವಲ್ ರೇವಣ್ಣನಿಂದ ತಪ್ಪಾಗಿದ್ದರೆ ಶಿಕ್ಷೆ ಆಗೇ ಆಗುತ್ತದೆ ಅದರಲ್ಲಿ ಸಂಶಯವೇ ಬೇಡ, ಪ್ರಜ್ವಲ್ ತನ್ನ ಸಹೋದರ ರೇವಣ್ಣನ ಮಗ ಅಂತ ತಾನು ಪರವಹಿಸಿಕೊಂಡು ಮಾತಾಡಲ್ಲ, ಅದರೆ ಇದರ ಹಿಂದಿನ ಮತ್ತು ಮುಂದಿನ ರಾಜಕಾರಣ ಇದೆಯಲ್ಲ ಅದರ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು. ರಾಜ್ಯದ ಡಿಸಿಎಂ ಸಿಡಿ ಪೆನ್ ಡ್ರೈವ್ ಮಾಡಿಸುವುದರಲ್ಲಿ ನಿಷ್ಣಾತರು, ಈ ಪ್ರಕರಣದಲ್ಲಿ ಅವರ ಪಾತ್ರವೇನು ಅನ್ನೋದು ದೃಢಪಡಬೇಕು, ಮಹಿಳೆಯರಿಂದ ಪ್ರತಿಭಟನೆ ಮಾಡಿಸುತ್ತಿದ್ದಾರಲ್ಲ ಅದೆಲ್ಲದರ ಬಗ್ಗೆ ಚರ್ಚೆಯಾಗಬೇಕು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದರೆ ಮಹಿಳೆಯರ ಬದುಕನ್ನ ಬೀದಿಗೆ ತಂದಿದ್ದಾರೆ ಎಂದು ಕುಮಾರಸ್ವಾಮಿ ಮಾಡುವ ಆರೋಪ ಅರ್ಥವಾಗುವುದಿಲ್ಲ. ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಮತ್ತು ಪೆನ್ ಡ್ರೈವ್ ಗಳನ್ನು ನೋಡಿದರೆ ಪ್ರಜ್ವಲ್ ರೇವಣ್ಣನೇ ವಿಡಿಯೋ ಮಾಡಿರುವುದು ಸ್ಪಷ್ಟವಾಗುತ್ತದೆ, ಹಿಡನ್ ಕೆಮೆರಾದ ಪಾತ್ರವೇನೂ ಕಾಣದು, ಯಾವ ಆಧಾರದಲ್ಲಿ ಕುಮಾರಸ್ವಾಮಿ ಅರೋಪ ಮಾಡುತ್ತಿದ್ದಾರೆಯೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ಪ್ರಕರಣ: ದೇವೇಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡಲು ಯತ್ನವೆಂದ ಕುಮಾರಸ್ವಾಮಿ