Rotten eggs: ಹಾಸನ ಜಿಲ್ಲೆಯ ಲಕ್ಷ್ಮೀಪುರ ಅಂಗನವಾಡಿ ಕೇಂದ್ರದ ಮಕ್ಕಳಿಗೆ ನಾಯಿಗಳೂ ಮೂಸದ ಕೊಳೆತ ಮೊಟ್ಟೆಗಳ ವಿತರಣೆ
ಸಂಬಂಧಪಟ್ಟ ಸಚಿವರು, ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕಾತಿಗಳಿಗೆ ಚುರುಕು ಮುಟ್ಟಿಸದಿದ್ದರೆ ಸರ್ಕಾರದ ಒಂದು ಉತ್ತಮ ಯೋಜನೆ ಹಳ್ಳಹಿಡಿಯಲಿದೆ
ಹಾಸನ: ನಗರಪ್ರದೇಶಗಳ ಇಂಟರ್ನ್ಯಾಷನಲ್ ಶಾಲೆಗಳಲ್ಲಿ ಓದುವ ಮತ್ತು ಗ್ರಾಮೀಣ ಪ್ರದೇಶಗಳ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾತಿ ಪಡೆಯುವ ಮಕ್ಕಳ ನಡುವೆ ಸ್ಥಿತಿವಂತಿಕೆಯ ಅಂಶ ಬಿಟ್ಟರೆ ಬೇರೆ ಏನಾದರೂ ವ್ಯತ್ಯಾಸವಿದೆಯೇ? ಮಕ್ಕಳು ಎಲ್ಲಿ ಓದಿದರೇನು ಅವರೆಲ್ಲ ಒಂದೇ ತಾನೆ? ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಲಕ್ಷ್ಮೀಪುರ (Lakshmipura) ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ (Anganwadi centre) ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ವಿತರಿಸಲಾಗಿದೆ. ಕೆಲ ಮೊಟ್ಟೆಗಳಂತೂ ನಾಯಿ ಕೂಡ ಮೂಸದಷ್ಟು ಕೊಳೆತಿವೆ, ಕೆಟ್ಟಿವೆ. ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಮೊಟ್ಟೆಗಳನ್ನು ಒದಗಿಸುತ್ತಿರುವುದು ಸ್ವಾಗತಾರ್ಗವೇ. ಆದರೆ, ಮೊಟ್ಟೆಗಳ ಸ್ಥಿತಿ ನೋಡಿ ಹೇಗಿದೆ, ಅವುಗಳನ್ನು ತಿಂದರೆ ಮಕ್ಕಳು ಅಸ್ವಸ್ಥಗೊಳ್ಳೋದು ನಿಶ್ಚಿತ. ಸಂಬಂಧಪಟ್ಟ ಸಚಿವರು, ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕಾತಿಗಳಿಗೆ ಚುರುಕು ಮುಟ್ಟಿಸದಿದ್ದರೆ ಸರ್ಕಾರದ ಒಂದು ಉತ್ತಮ ಯೋಜನೆ ಹಳ್ಳಹಿಡಿಯಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡು ಇನ್ನೂ ಎರಡು ತಿಂಗಳು ಕೂಡ ಆಗಿಲ್ಲ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ