ಪ್ರಗತಿ ಪರಿಶೀಲನೆ ಮೂಲಕ ಸಚಿವರ ಮೇಲೆ ಹಿಡಿತ ಸಾಧಿಸಲು ಮುಂದಾದ ಹೈಕಮಾಂಡ್; ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಟೆನ್ಷನ್
ಪ್ರಗತಿ ಪರಿಶೀಲನೆ ಮೂಲಕ ಸಿದ್ದರಾಮಯ್ಯ ಸಂಪುಟದ ಸಚಿವರ ಮೇಲೆ ಹಿಡಿತ ಸಾಧಿಸಲು ಹೈಕಮಾಂಡ್ ಮುಂದಾಗಿದೆ.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ (Congrees) 135 ಸ್ಥಾನಗಳನ್ನು ಗೆಲ್ಲುವ ಮುಖಾಂತ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದೆ. ಅಧಿಕಾರ ಚುಕ್ಕಾಣಿ ಹಿಡಿದ ನಂತರ ಮುಖ್ಯಮಂತ್ರಿ ಆಯ್ಕೆ ಮತ್ತು ಸಚಿವರ ಆಯ್ಕೆಗೆ ಸಾಕಷ್ಟು ಕಸರತ್ತು ನಡೆಯಿತು. ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದ್ದು, ಇದೀಗ ಈ ಸಚಿವರ ತಲೆ ಮೇಲೆ ತೂಗುಗತ್ತಿ ಇದೆ. ಹೌದು ಸಚಿವರ (Ministers) ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ಮಾಹಿತಿ ಪಡೆಯಲಿದೆ.
ಸಚಿವರು ನಡೆಸಿದ ಸಭೆ, ಭೇಟಿ ಮಾಡಿದ ಪ್ರಮುಖರ ಬಗ್ಗೆ ಹೈಕಮಾಂಡ್ ಮಾಹಿತಿ ಪಡೆಯಲಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ಸಚಿವರ ಕಾರ್ಯವೈಖರಿ ಮೇಲೆ ಹೈಕಮಾಂಡ್ ಹದ್ದಿನ ಕಣ್ಣು ಇಟ್ಟಿದೆ. ಪ್ರತಿ ತಿಂಗಳೂ ಸಚಿವರು ತಮ್ಮ ಸಾಧನೆ ಸಭೆಗಳ ಬಗ್ಗೆ ವರದಿ ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಸಂಚಲನ: ಕಾಂಗ್ರೆಸ್ನತ್ತ ಮುಖ ಮಾಡಿದ ಬಿಎಸ್ ಯಡಿಯೂರಪ್ಪ ಸಂಬಂಧಿ
ಈಗಾಗಲೇ ಸಚಿವ ಪ್ರಿಯಾಂಕ ಖರ್ಗೆ, ಸಚಿವ ಝಮೀರ್ ಅಹಮದ್ ಖಾನ್ ತಮ್ಮ ಮೊದಲ ತಿಂಗಳ ವರದಿ ಪ್ರಕಟಿಸಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಆಡಳಿತ ಹಿಡಿದಲ್ಲಿಟ್ಟುಕೊಳ್ಳಲು ಸಚಿವರ ಮೇಲೆ ಹೈಕಮಾಂಡ್ ಹಿಡಿತ ಸಾಧಿಸಲಿದೆ. ಸರ್ಕಾರಕ್ಕೆ ಯಾವುದೇ ಕಪ್ಪು ಚುಕ್ಕೆ ಬಾರದಂತೆ ನೋಡಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ಅಕಸ್ಮಾತ್ ಕಳಪೆ ಪ್ರದರ್ಶನ ತೋರುವ ಸಚಿವರ ಮಾಹಿತಿ ಬಂದರೆ ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ವಿಪಕ್ಷ ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಪ್ರಶ್ನಿಸಿದರೆ ದಾಖಲೆ ಸಮೇತ ತೋರಿಸಲು ಸಿಎಂ ಸಿದ್ದರಾಮಯ್ಯ ಟೀಂ ಸಿದ್ದವಾಗಿದೆ. ಸಚಿವ ಸಂಪುಟ ಬದಲಾವಣೆಯಂತ ಸಾಧ್ಯತೆ ಎದುರಾದರೆ ಪ್ರಗತಿ ಪರಿಶೀಲನೆ ಆಧಾರದ ಮೇಲೆ ಹೈಕಮಾಂಡ್ ನಿರ್ಣಯ ಕೈಗೊಳ್ಳಲಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:29 am, Tue, 11 July 23