ಮುನಿರತ್ನ ಆರ್ಆರ್ ನಗರ ಕಚೇರಿಗೆ ಪೊಲೀಸರಿಂದ ಬೀಗ: ಹೈಡ್ರಾಮಾ
ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ಲಕ್ಷ್ಮೀದೇವಿನಗರದ ಕಚೇರಿ ಶುಕ್ರವಾರ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಶಾಸಕರ ಕಚೇರಿಗೆ ಪೊಲೀಸರು ಬೀಗ ಹಾಕಿದ ಕಾರಣ ಸ್ಥಳದಲ್ಲಿ ಶಾಸಕರು ಹಾಗೂ ಖಾಕಿ ಮಧ್ಯೆ ವಾಗ್ವಾದ ನಡೆಯಿತು. ಮಹಿಳೆಯರೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುನಿರತ್ನ ಕಚೇರಿ ಎದುರು ನಡೆದ ಹೈಡ್ರಾಮಾ ವಿಡಿಯೋ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಿನ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ಕಚೇರಿಗೆ ಪೊಲೀಸರು ಬೀಗ ಹಾಕಿದ ಘಟನೆ ಶುಕ್ರವಾರ ನಡೆಯಿತು. ಈ ವಿಚಾರವಾಗಿ ಶಾಸಕರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು. ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀದೇವಿನಗರದ ಕಚೇರಿಯಲ್ಲಿ ಪಟಾಕಿ ಹಂಚಲು ಮುನರತ್ನ ಬೆಂಬಲಿಗರು ಮುಂದಾಗಿದ್ದರು. ಪರವಾನಗಿ ಪಡೆದು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರವೇ ಪಟಾಕಿ ಮಾರಾಟ ಮಾಡಬಹುದು, ಹಂಚಬಹುದು ಎಂಬ ನಿಯಮ ಇರುವ ಕಾರಣ ಪೊಲೀಸರು ಸ್ಥಳಕ್ಕೆ ತೆರಳಿ ಕಚೇರಿಗೆ ಬೀಗ ಜಡಿದರು. ಈ ವೇಳೆ, ಮುನಿರತ್ನ ಕಚೇರಿ ಬಳಿಗೆ ಬಂದ ಮಹಿಳೆಯರು, ನಾವು ಪಟಾಕಿ ಹೊಡೆಯಬೇಕು. ಮುನಿರತ್ನ ಅವರು ಪಟಾಕಿ ಕೊಡಬೇಕು, ನಮ್ಮ ಮಕ್ಕಳು ಪಟಾಕಿ ಸಿಡಿಸಬೇಕು. ನಾವು ಬಡವರು, ಹಬ್ಬ ಮಾಡಲು ಬಿಡಿ ಎಂದು ಆಗ್ರಹಿಸಿದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
