ಕರ್ನಾಟಕ ಗಡಿಯಲ್ಲಿ 400 ಕೋಟಿ ರೂ. ದರೋಡೆ: ಇಷ್ಟೊಂದು ಹಣ ಸೇರಿದ್ಯಾರಿಗೆ? ಸ್ಫೋಟಕ ಮಾಹಿತಿ ಬಯಲಿಗೆ
ಕರ್ನಾಟಕ ಗಡಿ ಭಾಗದ ಛೋರ್ಲಾ ಘಾಟ್‌ನಲ್ಲಿ ನಡೆದಿದ್ದ ಬರೋಬ್ಬರಿ 400 ಕೋಟಿ ರೂಪಾಯಿ ದರೋಡೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಆರಂಭದಲ್ಲಿ ಕೇವಲ ದರೋಡೆ ಎಂದು ಬಿಂಬಿತವಾಗಿದ್ದ ಈ ಪ್ರಕರಣದ ಆಳಕ್ಕೆ ಇಳಿದ ಮಹಾರಾಷ್ಟ್ರ ಎಸ್‌ಐಟಿ (SIT) ಅಧಿಕಾರಿಗಳಿಗೆ ಈಗ ರಾಜಕೀಯ ನಂಟು ಮತ್ತು ಬೃಹತ್ ಮನಿ ಲಾಂಡರಿಂಗ್ ಜಾಲದ ವಾಸನೆ ಬಡಿದಿದೆ. 400 ಕೋಟಿ ರೂಪಾಯಿ ಹಣ ಗುಜರಾತ್‌ನ ಅತ್ಯಂತ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದು ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಹೊರಬಿದ್ದಿದೆ.
ಬೆಳಗಾವಿ, (ಜನವರಿ 26): ಕರ್ನಾಟಕ ಗಡಿ (Karnataka Border) ಭಾಗದ ಛೋರ್ಲಾ ಘಾಟ್‌ನಲ್ಲಿ ನಡೆದಿದ್ದ ಬರೋಬ್ಬರಿ 400 ಕೋಟಿ ರೂಪಾಯಿ ದರೋಡೆ ಪ್ರಕರಣ ( Rs 400 crore Robbery Case) ದೇಶಾದ್ಯಂತ ಸಂಚಲನ ಮೂಡಿಸಿದೆ. ಆರಂಭದಲ್ಲಿ ಕೇವಲ ದರೋಡೆ ಎಂದು ಬಿಂಬಿತವಾಗಿದ್ದ ಈ ಪ್ರಕರಣದ ಆಳಕ್ಕೆ ಇಳಿದ ಮಹಾರಾಷ್ಟ್ರ ಎಸ್‌ಐಟಿ (SIT) ಅಧಿಕಾರಿಗಳಿಗೆ ಈಗ ರಾಜಕೀಯ ನಂಟು ಮತ್ತು ಬೃಹತ್ ಮನಿ ಲಾಂಡರಿಂಗ್ ಜಾಲದ ವಾಸನೆ ಬಡಿದಿದೆ. 400 ಕೋಟಿ ರೂಪಾಯಿ ಹಣ ಗುಜರಾತ್‌ನ ಅತ್ಯಂತ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದು ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಹೊರಬಿದ್ದಿದೆ. ನಿಷೇಧಿತ 2000 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳನ್ನು ಗೋವಾದಿಂದ ಸಾಗಿಸಲಾಗುತ್ತಿತ್ತು. ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಸಾಳ್ವೆ ಅಲಿಯಾಸ್ ಶೇಟ್ ಈ ವ್ಯವಹಾರದ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಸದ್ಯ ಇಬ್ಬರ ಆಡಿಯೋ ವೈರಲ್ ಆಗಿದೆ.
