BJP Protest at Freedom Park: ಸಿಎನ್ ಅಶ್ವಥ್ ನಾರಾಯಣರನ್ನು ಯಡಿಯೂರಪ್ಪ ಕೂತಲ್ಲಿಗೆ ಅಕ್ಷರಶಃ ಎಳೆತಂದ ಸದಾನಂದಗೌಡ

BJP Protest at Freedom Park: ಸಿಎನ್ ಅಶ್ವಥ್ ನಾರಾಯಣರನ್ನು ಯಡಿಯೂರಪ್ಪ ಕೂತಲ್ಲಿಗೆ ಅಕ್ಷರಶಃ ಎಳೆತಂದ ಸದಾನಂದಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 04, 2023 | 3:54 PM

ಸದಾನಂದಗೌಡರು ಛಲ ಬಿಡದ ತ್ರಿವಿಕ್ರಮನಂತೆ ಎದ್ದುಹೋಗಿ ಅಶ್ವಥ್ ನಾರಾಯಣರನ್ನು ಯಡಿಯೂರಪ್ಪ ಪಕ್ಕ ಎಳೆದುತಂದು ಕೂರಿಸುತ್ತಾರೆ!

ಬೆಂಗಳೂರು: ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯಥಾವತ್ ಜಾರಿಗೆ ಆಗ್ರಹಿಸಿ ಬಿಜೆಪಿ ರಾಜ್ಯ ಘಟಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಇಂದು ಬೃಹತ್ ಪ್ರತಿಭಟನೆ ಶುರುಮಾಡಿದೆ. ವಿಧಾನ ಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಸ್ವಲ್ಪ ಹೊತ್ತು ಭಾಗಿಯಾಗು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮಾಜಿ ಉಪ ಮುಖ್ಯಮಂತ್ರಿ ಸಿಎನ್ ಅಶ್ವಥ್ ನಾರಾಯಣರನ್ನು (Dr CN Ashwath Narayan) ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಸದಾನಂದ ಗೌಡ (Sadananda Gowda) ಬರಮಾಡಿಕೊಂಡ ರೀತಿ ಕುತೂಹಲ ಮೂಡಿಸಿತು. ಅಶ್ವಥ್ ನಾರಾಯಣ ದೂರದಲ್ಲಿ ಕೂರಲು ಪ್ರಯತ್ನಿಸಿದಾಗ ಸದಾನಂದಗೌಡ ಮೊದಲಿಗೆ, ಯಡಿಯೂರಪ್ಪ ಪಕ್ಕ ಬಂದು ಕೂರಿ ಅಂತ ಸನ್ನೆ ಮಾಡುತ್ತಾರೆ. ಶಾಸಕ, ಪರ್ವಾಗಿಲ್ಲ ಇಲ್ಲೇ ಕೂರುತ್ತೇನೆ ಅಂದಾಗ ಸದಾನಂದಗೌಡರು, ಛಲ ಬಿಡದ ತ್ರಿವಿಕ್ರಮನಂತೆ ಎದ್ದುಹೋಗಿ ಅವರನ್ನು ಯಡಿಯೂರಪ್ಪ ಪಕ್ಕ ಎಳೆದುತಂದು ಕೂರಿಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ