ಎಲ್ಲರೂ ನಂಗೆ ಅಭಿಮಾನಿಗಳು; ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
Celebrities War: ಕನ್ನಡ ಚಿತ್ರರಂಗದಲ್ಲಿ ಸದ್ಯ ಎಲ್ಲ ಕಡೆಗಳಲ್ಲಿ ಫ್ಯಾನ್ ವಾರ್ಗಳ ಬಗ್ಗೆ ಚರ್ಚೆಗಳು ನಡೆಯುತ್ತಾ ಇವೆ. ಸೆಲೆಬ್ರಿಟಿಗಳ ಅಭಿಮಾನಿಗಳ ಮಧ್ಯೆ ಕಿತ್ತಾಟ ಜೋರಾಗಿದೆ ಎಂದರೂ ತಪ್ಪಾಗಲಾರದು. ಹೀಗಿರುವಾಗಲೇ ಸಾಧು ಕೋಕಿಲ ಅವರು ಒಂದು ವಿಷಯದ ಬಗ್ಗೆ ಮಾತನಾಡಿದ್ದಾರೆ. ಅದುವೇ ಫ್ಯಾನ್ ವಾರ್.
ಕನ್ನಡ ಚಿತ್ರರಂಗದಲ್ಲಿ ಫ್ಯಾನ್ ವಾರ್ ಬಗ್ಗೆ ಚರ್ಚೆ ನಡೆಯುತ್ತಿರುವುದು ತಿಳಿದೇ ಇದೆ. ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳು ಸಾಕಷ್ಟು ಕಿತ್ತಾಡಿಕೊಳ್ಳುತ್ತಿರುವುದನ್ನು ನೋವು ನೋಡಿರಬಹುದು. ಈ ಬಗ್ಗೆ ಸಾಧು ಕೋಕಿಲಗೆ ಪ್ರಶ್ನೆ ಮಾಡಲಾಯಿತು. ಎಲ್ಲಾ ಸ್ಟಾರ್ಸ್ಗಳ ಫ್ಯಾನ್ಸ್ ನನಗೆ ಅಭಿಮಾನಿಗಳು. ಹೀಗಾಗಿ, ನಾನು ಈ ಬಗ್ಗೆ ಮಾತನಾಡುವುದೇ ಇಲ್ಲ ಎಂದಿದ್ದಾರೆ ಸಾಧು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 24, 2025 10:57 AM
