‘ಕೈ ನಡುಕ ಬರುತ್ತಿತ್ತು’; ‘ಜೇಮ್ಸ್’ ಡಬ್ಬಿಂಗ್ ವೇಳೆ ಸಾಧು ಕೋಕಿಲಗೆ ಆದ ಅನುಭವ ಎಂಥದ್ದು?
ಪುನೀತ್ ಇಲ್ಲದೆ ಇಂದು (ಮಾರ್ಚ್ 17) ಬರ್ತ್ಡೇ ಆಚರಿಸಲಾಗುತ್ತಿದೆ. ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್ ಅವರ ಕಟೌಟ್ ನಿಲ್ಲಿಸಿ ಹಬ್ಬದ ರೀತಿಯಲ್ಲಿ ಬರ್ತ್ಡೇ ಆಚರಿಸಲಾಗಿದೆ
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಐದು ತಿಂಗಳು ಆಗುತ್ತಾ ಬಂದಿದೆ. ಅವರಿಲ್ಲದೆ ಇಂದು (ಮಾರ್ಚ್ 17) ಬರ್ತ್ಡೇ ಆಚರಿಸಲಾಗುತ್ತಿದೆ. ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್ ಅವರ ಕಟೌಟ್ ನಿಲ್ಲಿಸಿ ಹಬ್ಬದ ರೀತಿಯಲ್ಲಿ ಬರ್ತ್ಡೇ ಆಚರಿಸಲಾಗಿದೆ. ಪುನೀತ್ ಜತೆಗೆ ಕಳೆದ ಸಂತೋಷವನ್ನು ಮೆಲಕು ಹಾಕಲಾಗುತ್ತಿದೆ. ಪುನೀತ್ ಅವರು ಈಗಲೂ ನಮ್ಮ ಜತೆಗೆ ಇದ್ದಾರೆ ಎನ್ನುವ ಭಾವನೆಯನ್ನು ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ವ್ಯಕ್ತಪಡಿಸುತ್ತಿದ್ದಾರೆ. ಪುನೀತ್ ಜತೆ ತುಂಬಾನೇ ಆಪ್ತವಾಗಿದ್ದ ಸಾಧು ಕೋಕಿಲ ಅವರು (Sadhu Kokila) ‘ಜೇಮ್ಸ್’ (James) ಡಬ್ಬಿಂಗ್ ಬಗ್ಗೆ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಾಧು ಕೋಕಿಲ ಕೂಡ ನಟಿಸಿದ್ದಾರೆ. ಡಬ್ಬಿಂಗ್ ವೇಳೆ ಪುನೀತ್ ಜತೆಗೆ ನಟಿಸಿದ ದೃಶ್ಯ ನೋಡಿ ಸಾಧು ಕೋಕಿಲ ಅವರ ಕೈ ನಡುಗುತ್ತಿದ್ದವು, ಧ್ವನಿ ಬಿದ್ದಂತೆ ಭಾಸವಾಗುತ್ತಿತ್ತು. ಈ ವಿಚಿತ್ರ ಅನುಭವದ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ನೋಡಿ ಸಾರ್ವಜನಿಕವಾಗಿಯೇ ಕಣ್ಣೀರು ಹಾಕಿದ ಪ್ರಿಯಾ ಆನಂದ್
James Movie Review: ಜೇಮ್ಸ್ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್ಫುಲ್’ ಶೋ