ಗೆಳೆಯ ದರ್ಶನ್ ಕಾಣಲು ಬಂದು ನಿರಾಶರಾಗಿ ತೆರಳಿದ ಸಾಧು

|

Updated on: Jul 23, 2024 | 4:26 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅನ್ನು ಭೇಟಿಯಾಗಲು ಗೆಳೆಯ, ಸಹ ನಟ ಸಾಧು ಕೋಕಿಲ ಆಗಮಿಸಿದ್ದರು. ಆದರೆ ದರ್ಶನ್ ಭೇಟಿಗೆ ಅವಕಾಶ ಸಿಗದೆ ವಾಪ್ಸಾದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು ಕಾಣಲು ಕೆಲವು ಗೆಳೆಯರು, ಆಪ್ತರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುತ್ತಿದ್ದಾರೆ. ತೀರ ಆತ್ಮೀಯರನ್ನಷ್ಟೆ ನಟ ದರ್ಶನ್ ಜೈಲಿನಲ್ಲಿ ಭೇಟಿ ಆಗುತ್ತಿದ್ದಾರೆ. ನಿನ್ನೆ ನಟ ವಿನೋದ್ ರಾಜ್ ಅವರು, ವಿಜಯಲಕ್ಷ್ಮಿ ದರ್ಶನ್ ಹಾಗೂ ದಿನಕರ್ ತೂಗುದೀಪ ಜೊತೆಗೆ ಜೈಲಿಗೆ ಹೋಗಿ ದರ್ಶನ್ ಅನ್ನು ಭೇಟಿ ಆಗಿದ್ದರು. ಇಂದು ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ತಮ್ಮ ಗೆಳೆಯನನ್ನು ಕಾಣಲು ಜೈಲಿಗೆ ಹೋಗಿದ್ದರು. ಆದರೆ ದರ್ಶನ್​ರ ಭೇಟಿಗೆ ಸಾಧುಕೋಕಿಲಗೆ ಅವಕಾಶ ಸಿಗದ ಕಾರಣ ಬೇಸರದಿಂದಲೇ ಸಾಧು ಕೋಕಿಲ ವಾಪಸ್ಸಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ