‘ಹ್ಯಾಟ್ರಿಕ್’ ಹೀರೋ ಸ್ಯಾಮ್ ಕರನ್
ಶ್ರೀಲಂಕಾ ಬ್ಯಾಟರ್ಗಳು ಬೇಗನೆ ಆಲೌಟ್ ಆಗಲು ಮುಖ್ಯ ಕಾರಣ ಸ್ಯಾಮ್ ಕರನ್. 16ನೇ ಓವರ್ನ ಕೊನೆಯ ಮೂರು ಎಸೆತಗಳಲ್ಲಿ ದಸುನ್ ಶಾನಕ, ಮಹೀಶ್ ತೀಕ್ಷಣ ಹಾಗೂ ಮತೀಶ ಪತಿರಾಣ ವಿಕೆಟ್ ಕಬಳಿಸಿ ಸ್ಯಾಮ್ ಕರನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡ್ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಕ್ರಿಸ್ ಜೋರ್ಡನ್ ಇಂಗ್ಲೆಂಡ್ ಪರ ಟಿ20 ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ನ ಸಾಧನೆ ಮಾಡಿದ್ದರು.
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಸ್ಯಾಮ್ ಕರನ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. ಪಲ್ಲೆಕೆಲ್ಲೆ ಸ್ಟೇಡಿಯಂನಲ್ಲಿ ನಡೆದ ಮಳೆಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 16.2 ಓವರ್ಗಳಲ್ಲಿ 133 ರನ್ಗಳಿಸಿ ಆಲೌಟ್ ಆಯಿತು.
ಹೀಗೆ ಲಂಕಾ ಬ್ಯಾಟರ್ಗಳು ಬೇಗನೆ ಆಲೌಟ್ ಆಗಲು ಮುಖ್ಯ ಕಾರಣ ಸ್ಯಾಮ್ ಕರನ್. 16ನೇ ಓವರ್ನ ಕೊನೆಯ ಮೂರು ಎಸೆತಗಳಲ್ಲಿ ದಸುನ್ ಶಾನಕ, ಮಹೀಶ್ ತೀಕ್ಷಣ ಹಾಗೂ ಮತೀಶ ಪತಿರಾಣ ವಿಕೆಟ್ ಕಬಳಿಸಿ ಸ್ಯಾಮ್ ಕರನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡ್ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಕ್ರಿಸ್ ಜೋರ್ಡನ್ ಇಂಗ್ಲೆಂಡ್ ಪರ ಟಿ20 ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ನ ಸಾಧನೆ ಮಾಡಿದ್ದರು.
ಇನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ಈ ಪಂದ್ಯದಲ್ಲಿ 17 ಓವರ್ಗಳಲ್ಲಿ 133 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 15 ಓವರ್ಗಳಲ್ಲಿ 125 ರನ್ ಕಲೆಹಾಕಿದ್ದರು. ಈ ವೇಳೆ ಮತ್ತೆ ಮಳೆ ಬಂದಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್ ತಂಡವನ್ನು 11 ರನ್ಗಳಿಂದ ವಿಜಯಿ ಎಂದು ಘೋಷಿಸಲಾಯಿತು.
