ಸ್ಯಾಮ್ಸಂಗ್ ಗೆಲಾಕ್ಸಿ ಟ್ಯಾಬ್ ಎ8 ಭಾರತದಲ್ಲಿ ಲಾಂಚ್ ಆಗಿದೆ; ವೈಶಿಷ್ಟ್ಯತೆ, ಬೆಲೆ ಮತ್ತು ಇತರ ವಿವರಗಳು ಇಲ್ಲಿವೆ
ಸ್ಯಾಮ್ಸಂಗ್ ಗೆಲಾಕ್ಸಿ ಟ್ಯಾಬ್ ಎ8 (Samsung Galaxy Tab A8) ಈಗ ಭಾರತದಲ್ಲಿ ಲಭ್ಯವಿದೆ. ಟ್ಯಾಬ್ ಸಿರೀಸ್ನಲ್ಲಿ ಇದು ಅತ್ಯಂತ ಶಕ್ತಿಶಾಲಿ ಟ್ಯಾಬ್ ಎಂದು ಸ್ಯಾಮ್ಸಂಗ್ ಕಂಪನಿ ಹೇಳಿಕೊಂಡಿದೆ.
ಸ್ಯಾಮ್ಸಂಗ್ ಗೆಲಾಕ್ಸಿ ಟ್ಯಾಬ್ ಎ8 (Samsung Galaxy Tab A8) ಈಗ ಭಾರತದಲ್ಲಿ ಲಭ್ಯವಿದೆ. ಟ್ಯಾಬ್ ಸಿರೀಸ್ನಲ್ಲಿ ಇದು ಅತ್ಯಂತ ಶಕ್ತಿಶಾಲಿ ಟ್ಯಾಬ್ ಎಂದು ಸ್ಯಾಮ್ಸಂಗ್ ಕಂಪನಿ ಹೇಳಿಕೊಂಡಿದೆ. ಗೆಲಾಕ್ಸಿ ಟ್ಯಾಬ್ ಎ8 ಹೊಸ ವಿನ್ಯಾಸ ಮತ್ತು ದೊಡ್ಡ ಸ್ಕ್ರೀನ್, ದೊಡ್ಡ ಬ್ಯಾಟರಿಯೊಂದಿಗೆ ಲಭ್ಯವಿದ್ದು 3ಜಿಬಿ ಱಮ್ ಮತ್ತು 32ಜಿಬಿ ಸ್ಟೋರೇಜ್ ಹೊಂದಿರುವ ವೈ-ಫೈ ಮಾಡೆಲ್ ನ (Wi-Fi Model) ಆರಂಭಿಕ ಬೆಲೆ ರೂ. 17,999. ವೈ-ಫೈ ಸಂಪರ್ಕ, 4ಜಿಬಿ ಪ್ಲಸ್ 64ಜಿಬಿ ಮಾಡೆಲ್ ಬೆಲೆ ರೂ.19,999. ಇದರಲ್ಲಿ ಎಲ್ಟಿಇ ವೇರಿಯಂಟ್ (LTE Variant) 3ಜಿಬಿ ಮತ್ತು 32ಜಿಬಿ ಸ್ಟೋರೇಜ್ ಹೊಂದಿದ್ದು ಅದರ ಬೆಲೆ ರೂ. 21,999. ಹಾಗೆಯೇ ಇದೇ ವೇರಿಯಂಟ್ ನ 4ಜಿಬಿ ಮತ್ತು 64 ಜಿಬಿ ಸ್ಟೋರೇಜ್ ಸಾಮರ್ಥ್ಯದ ಟ್ಯಾಬ್ ಬೆಲೆ ರೂ. 23,999 ಅಂತ ಕಂಪನಿಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ.
ನೀವು ಐಸಿಐಸಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಟ್ಯಾಬ್ ಖರೀದಿಸಿದರೆ, ರೂ. 2,000 ಕ್ಯಾಶ್ ಬ್ಯಾಕ್ ಅನ್ನು ಲಾಂಚ್ ಆಫರ್ ಆಗಿ ಕಂಪನಿ ನೀಡುತ್ತದೆ. ಹಾಗೆಯೇ, ಗೆಲಾಕ್ಸಿ ಟ್ಯಾಬ್ ಎ8 ಖರೀದಿಸುವವರು ರೂ. 4,499 ಗಳ ಬುಕ್ ಕವರ್ ಅನ್ನು ಕೇವಲ ರೂ. 999ಕ್ಕೆ ಪಡೆಯಬಹುದು. ಸ್ಯಾಮ್ಸಂಗ್ ಗೆಲಾಕ್ಸಿ ಟ್ಯಾಬ್ 8ಎ 10.5-ಇಂಚಿನ ಪರದೆ, ಸ್ಲಿಮ್ ಬೆಜೆಲ್ ಮತ್ತು 16:10 ಆಕಾರ ಅನುಪಾತದೊಂದಿಗೆ ಬರುತ್ತದೆ.
ಈ ಟ್ಯಾಬ್ ಶೇಕಡಾ 80 ರಷ್ಟು ಸ್ಕ್ರೀನ್ ಟು ಬಾಡಿ ಅನುಪಾತವನ್ನು ನೀಡುತ್ತದೆ ಮತ್ತು ಎದ್ದು ಕಾಣುವ ಮತ್ತು ಕ್ರಿಯಾತ್ಮಕ ವೀಕ್ಷಣೆಯ ಅನುಭವವನ್ನು ಸಹ ನೀಡುತ್ತದೆ ಎಂದು ಹೇಳಲಾಗುತ್ತಿದೆ.
ಸ್ಯಾಮ್ಸಂಗ್ ಗೆಲಾಕ್ಸಿ ಟ್ಯಾಬ್ 8ಎ ಡಾಲ್ಬಿ ಅಟ್ಮಾಸ್‌ಗೆ ಬೆಂಬಲಿತ ಕ್ವಾಡ್-ಸ್ಪೀಕರ್‌ಗಳನ್ನು ಹೊಂದಿದೆ. ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲನೆಗೊಳ್ಳುವ, ಗೆಲಾಕ್ಸಿ ಟ್ಯಾಬ್ 8ಎ 7,040 ಎಮ್ಎಎಚ್ ಬ್ಯಾಟರಿಯಿಂದ ಬೆಂಬಲಿತವಾಗಿದೆ. ಸದರಿ ಟ್ಯಾಬ್ಲೆಟ್ 15ಡಬ್ಲ್ಯೂ ವೇಗದ ಚಾರ್ಜಿಂಗ್‌ಗೆ ಹೊಂದಿರುವುದು ವಿಶೇಷ.
ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಯ ಚಾಟ್ಸ್ ತಯಾರಿಕೆ ನೋಡಿ ಮೂಗುಮುರಿದ ನೆಟ್ಟಿಗರು: ಸ್ಟ್ರೀಟ್ ಫುಡ್ ತಯಾರಿಕೆಯ ವಿಡಿಯೋ ವೈರಲ್