Samsung Galaxy Z Fold: ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್

Samsung Galaxy Z Fold: ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್

ಕಿರಣ್​ ಐಜಿ
|

Updated on: Jul 04, 2024 | 7:39 AM

ಹೊಸ ಗ್ಯಾಲಕ್ಸಿ ಝಡ್ ಸರಣಿಯ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಜ್ಜಾಗಿದೆ. ನೂತನ ಫೋಲ್ಡ್ ಸರಣಿಗೆ ಮುಂಗಡ ಬುಕಿಂಗ್ ಆರಂಭಿಸಿದ್ದು, ಮುಂಗಡ ಬುಕಿಂಗ್ ಮಾಡುವವರಿಗೆ ವಿವಿಧ ಆರಂಭಿಕ ಆಫರ್ ಮತ್ತು ವಿಶೇಷ ಕೊಡುಗೆಗಳ ಆಫರ್ ಪಡೆಯಲಿದ್ದಾರೆ.

ದೇಶದ ಜನಪ್ರಿಯ ಗ್ಯಾಜೆಟ್ ಮತ್ತು ಸ್ಮಾರ್ಟ್​​ಫೋನ್ ಬ್ರ್ಯಾಂಡ್ ಸ್ಯಾಮ್‌ಸಂಗ್, ಹೊಸ ಗ್ಯಾಲಕ್ಸಿ ಝಡ್ ಸರಣಿಯ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಜ್ಜಾಗಿದೆ. ನೂತನ ಫೋಲ್ಡ್ ಸರಣಿಗೆ ಮುಂಗಡ ಬುಕಿಂಗ್ ಆರಂಭಿಸಿದ್ದು, ಮುಂಗಡ ಬುಕಿಂಗ್ ಮಾಡುವವರಿಗೆ ವಿವಿಧ ಆರಂಭಿಕ ಆಫರ್ ಮತ್ತು ವಿಶೇಷ ಕೊಡುಗೆಗಳ ಆಫರ್ ಪಡೆಯಲಿದ್ದಾರೆ. ಗ್ರಾಹಕರು ಸ್ಯಾಮ್‌ಸಂಗ್.ಕಾಮ್, ಸ್ಯಾಮ್‌ಸಂಗ್ ಮಳಿಗೆಗಳು, ಅಮೆಜಾನ್.ಇನ್, ಫ್ಲಿಪ್​ಕಾರ್ಟ್.ಕಾಮ್ ಮತ್ತು ದೇಶದ ವಿವಿಧ ರಿಟೇಲ್ ಮಳಿಗೆಗಳಲ್ಲಿ ₹2000 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಪ್ರಿ ಬುಕಿಂಗ್ ಮಾಡಬಹುದು. ನೂತನ ಗ್ಯಾಲಕ್ಸಿ ಝಡ್ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮುಂಗಡವಾಗಿ ಕಾಯ್ದಿರಿಸುವ ಗ್ರಾಹಕರು ₹7000 ಮೌಲ್ಯದ ವಿವಿಧ ಪ್ರಯೋಜನಗಳನ್ನು ಪಡೆಯಲಿದ್ದಾರೆ.