ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿ ಅಂತ ವರಿಷ್ಠರು ಹೇಳಿದ್ದಾರೆ: ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಚನೆಯಿದೆಯೇ ಅಂತ ಕೇಳಿದರೆ; ಆಕಾಕ್ಷಿಗಳು ಆ ಸಮುದಾಯದಲ್ಲೂ ಇದ್ದಾರೆ, ಒಬಿಸಿ ಮತ್ತು ಲಿಂಗಾಯತ ಸಮುದಾಯಗಳಲ್ಲೂ ಇದ್ದಾರೆ, ಗೆಲ್ಲಬಹುದಾದ ಮತ್ತು ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಮುಖಂಡನ ತಲಾಶ್ ಇದೆ ಎಂದು ಜಾರಕಿಹೊಳಿ ಹೇಳಿದರು.
ಹಾವೇರಿ: ಹಾವೇರಿ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವ ಉಸ್ತುವಾರಿಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನೀಡಲಾಗಿದೆಯೇ? ಇವತ್ತು ನಗರದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಆಡಿದ ಮಾತು ಕೇಳಿಸಿಕೊಂಡವರಿಗೆ ಹಾಗನ್ನಿಸಿದ್ದು ಸುಳ್ಳಲ್ಲ. ಉಪ ಚುನಾವಣೆಗ ಇನ್ನೂ 4 ತಿಂಗಳು ಸಮಯವಿದೆ, ಅದರೆ ಈಗಿಂದಲೇ ಪಕ್ಷ ಸಂಘಟನೆ ಕೆಲಸ ಶುರುಮಾಡಿ, ಮತ ವಿಭಜನೆ ಅಗದಂತೆ ಎಚ್ಚರವಹಿಸಿ ಅಂತ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಂದ ಸೂಚನೆ ಬಂದಿದ್ದು ಅದೇ ನಿಟ್ಟನಲ್ಲಿ ತಾವು ಕಾರ್ಯೋನ್ಮುಖರಾಗಿರುವುದಾಗಿ ಸತೀಶ್ ಹೇಳಿದರು. ಟಿಕೆಟ್ ಯಾರಿಗೆ ಸಿಗಲಿದೆ ಅನ್ನೋದನ್ನು ಎಐಸಿಸಿ ನಿರ್ಧರಿಸುತ್ತದೆ, ಆದರೆ ಅದಕ್ಕಿನ್ನೂ ಕಾಲಾವಕಾಶವಿದೆ ಎದು ಹೇಳಿದರು. ಟಿಕೆಟ್ ಬಹಳಷ್ಟು ಜನ ಕೇಳುತ್ತಿದ್ದಾರೆ, ಕೇಳೋದು ತಪ್ಪು ಅಂತ ಹೇಳಲಾಗಲ್ಲ, ಕೇಳಲು ಅವರು ಸ್ವತಂತ್ರರು ಆದರೆ ಅಂತಿಮ ತೀರ್ಮಾನ ತೆಗೆದುಕೊಳ್ಳೋದು, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಮತ್ತು ಪಕ್ಷದ ಹೈಕಮಾಂಡ್ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತಮ್ಮ ನ್ಯೂನತೆಗಳನ್ನು ಮುಚ್ಚಿಕೊಳ್ಳಲು ಸತೀಶ್ ಜಾರಕಿಹೊಳಿ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಸವದಿ ಬೆಂಬಲಿಗರು