ಸ್ಯಾಮ್ಸಂಗ್ ಗೆಲಾಕ್ಸಿ ಸರಣಿ ದುಬಾರಿ ಫೋನ್​​​ಗಳಲ್ಲಿ ಇನ್ನು ಮುಂದೆ ಜಾಹೀರಾತುಗಳು ಇರೊದಿಲ್ವಂತೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 26, 2021 | 5:29 PM

ಗೆಲ್ಯಾಕ್ಸಿ ಸರಣಿಯ ಫೋನ್​ಗಳನ್ನು ಬಳಸುವವರಿಂದ ತನಗೆ ಸಾಕಷ್ಟು ದೂರು ಬಂದಿರುವುದನ್ನು ಸ್ಯಾಮ್ಸಂಗ್ ದೃಢಪಡಿಸಿದೆ. ತಮ್ಮ ಗ್ರಾಹಕರ ದೂರುಗಳನ್ನು ಮಾನ್ಯ ಮಾಡುವುದಾಗಿ ಹೇಳಿರುವ ಸ್ಯಾಮ್ಸಂಗ್ ಸಂಸ್ಥೆಯ ಧಣಿಗಳು ಅವರ ಆಗ್ರಹದ ಮೇರೆಗೆ ತನ್ನಆ್ಯಪ್​​ಗಳಿಗೆ ಜಾಹೀರಾತುಗಳು ಬರುವುದನ್ನು ನಿಲ್ಲಿಸುವುದಾಗಿ ಹೇಳಿದೆ.

ಸ್ಯಾಮ್ಸಂಗ್ ಹೈಎಂಡ್ ಫೋನ್ ಬಳಸುವವರಲ್ಲಿ ನೀವೂ ಒಬ್ಬರಾಗಿದ್ದರೆ ಆ್ಯಾಪ್​​ನಲ್ಲಿ ಬರುವ ಜಾಹೀರಾತುಗಳಿಂದ ಬೇಸತ್ತು ಹೋಗಿರುತ್ತೀರಿ. ಬಳಕೆದಾರರ ದೂರುಗಳು ಕಂಪನಿ ಧಣಿಗಳ ಕಿವಿಗೂ ಬಿದ್ದಂತಿದೆ. ಹಾಗಾಗೇ, ತನ್ನ ಸಂಸ್ಥೆಯ ಆ್ಯಪ್​ಗಳಲ್ಲಿರುವ ಜಾಹೀರಾತುಗಳನ್ನು ತೆಗೆದುಹಾಕಿ ಫೋನ್​ಗಳನ್ನು ಯೂಸರ್-ಫ್ರೆಂಡ್ಲೀಯಾಗಿ ಪರಿವರ್ತಿಸುವ ಮಹತ್ವದ ನಿರ್ಣಯವನ್ನು ಸ್ಯಾಮ್ಸಂಗ್ ತೆಗೆದುಕೊಂಡಿದೆ.

ಇತ್ತೀಚಿಗೆ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಸ್ಯಾಮ್ಸಂಗ್ ಕಂಪನಿಯು ಈ ವರ್ಷಾಂತ್ಯದ ವೇಳೆಗೆ ತನ್ನ ಆ್ಯಪ್​​ಗಳಿಂದ ಜಾಹೀರಾತುಗಳನ್ನು ತೆಗೆದುಹಾಕುವ ಬಗ್ಗೆ ಖಚಿತಡಿಸಿತ್ತು. ಸ್ಯಾಮ್ಸಂಗ್ ಹವಾಮಾನ, ಸ್ಯಾಮ್ಸಂಗ್ ಪೇ, ಮತ್ತು ಸ್ಯಾಮ್ಸಂಗ್ ಥೀಮ್ ಒಳಗೊಂಡಂತೆ ಅಪ್ಡೇಟ್​ಗಳನ್ನು ತನ್ನ ಆ್ಯಪ್​​ಗಳಿಗೆ ರೋಲ್ ಔಟ್ ಮಾಡಲಾಗುವುದೆಂದು ಸಹ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಗೆಲ್ಯಾಕ್ಸಿ ಸರಣಿಯ ಫೋನ್​ಗಳನ್ನು ಬಳಸುವವರಿಂದ ತನಗೆ ಸಾಕಷ್ಟು ದೂರು ಬಂದಿರುವುದನ್ನು ಸ್ಯಾಮ್ಸಂಗ್ ದೃಢಪಡಿಸಿದೆ. ತಮ್ಮ ಗ್ರಾಹಕರ ದೂರುಗಳನ್ನು ಮಾನ್ಯ ಮಾಡುವುದಾಗಿ ಹೇಳಿರುವ ಸ್ಯಾಮ್ಸಂಗ್ ಸಂಸ್ಥೆಯ ಧಣಿಗಳು ಅವರ ಆಗ್ರಹದ ಮೇರೆಗೆ ತನ್ನಆ್ಯಪ್​​ಗಳಿಗೆ ಜಾಹೀರಾತುಗಳು ಬರುವುದನ್ನು ನಿಲ್ಲಿಸುವುದಾಗಿ ಹೇಳಿದೆ.

ಈ ಹಿಂದಿನ ವರದಿಯಲ್ಲಿ ಉಲ್ಲೇಖಿಸಲಾಗಿರುವ ಹಾಗೆ, ಸ್ಯಾಮ್ಸಂಗ್ ಮೊಬೈಲ್ ಕಮ್ಯುನಿಕೇಷನ್ಸ್ ಬಿಸಿನೆಸ್ ನ ಮುಖ್ಯಸ್ಥ ರೋಹ್ ತಾಯ್-ಮೂನ್ ಬದಲಾವಣೆಗಳನ್ನು ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದು ವರ್ಜ್ಗೆ ನೀಡಿರುವ ಹೇಳಿಕೆಯೊಂದರಲ್ಲಿ ಸ್ಯಾಮ್ಸಂಗ್ ಸಂಸ್ಥೆ ತಿಳಿಸಿದೆ.

ಗೆಲಾಕ್ಸಿ ಸರಣಿಯ 20,000 ರೂ. ಗಳ ಸೆಟ್​ನಲ್ಲಿ ಒಂದಷ್ಟು ಜಾಹೀರಾತುಗಳು ಕಾಣಿಸುತ್ತವೆ ಆದರೆ, ರೂ. 1 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಸೆಟ್​ಗಳಲ್ಲಿ ಅವು ಇರುವುದಿಲ್ಲ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ:  ರೇಪ್ ಮಾಡಿ ವಿಡಿಯೋ ಮಾಡಿದ್ದ ಕಾಮುಕರು ದೂರು ಕೊಡದಂತೆ ಬೆದರಿಸಿದ್ದರು; ಸ್ನೇಹಿತನಿಗೆ ಕಲ್ಲಿನಿಂದ ಹೊಡೆದಿದ್ದರು