ಮಹೀಂದ್ರಾ & ಮಹಿಂದ್ರಾ ಸಂಸ್ಥೆಯ ಮಹಿಂದ್ರಾ ಎಕ್ಸ್​ಯುವಿ 700ಗೆ ಸಿಗುತ್ತಿದೆ ಉತ್ತಮ ಪ್ರತಿಕ್ರಿಯೆ, ಬೆಲೆ ಭಾರಿ ಸ್ಪರ್ಧಾತ್ಮಕ!

ಮಹೀಂದ್ರಾ & ಮಹಿಂದ್ರಾ ಸಂಸ್ಥೆಯ ಮಹಿಂದ್ರಾ ಎಕ್ಸ್​ಯುವಿ 700ಗೆ ಸಿಗುತ್ತಿದೆ ಉತ್ತಮ ಪ್ರತಿಕ್ರಿಯೆ, ಬೆಲೆ ಭಾರಿ ಸ್ಪರ್ಧಾತ್ಮಕ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 26, 2021 | 7:37 PM

ಕಂಪನಿಯ ಕಾರುಗಳು ಭಾರಿ ಜನಪ್ರಿಯತೆ ಕಂಡುಕೊಂಡಿರುವುದರಲ್ಲಿ ಎರಡು ಮಾತಿಲ್ಲ. ತನ್ನ ಕಾರುಗಳ ಮೂಲಕ ಮಹೀಂದ್ರಾ & ಮಹೀಂದ್ರಾ ಸಂಸ್ಥೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಕುದುರಿಸಿಕೊಂಡಿದೆ.

ಬಹು ನಿರೀಕ್ಷಿತ ಮತ್ತು ಇಂಟರ್ನೆಟ್ ನಲ್ಲಿ ಇಮೇಜ್​ಗಳ ಸೋರಿಕೆಯಾದ ನಂತರ ಮಹಿಂದ್ರಾ ಗ್ರೂಪ್ ತನ್ನ ಮಹತ್ವಾಕಾಂಕ್ಷೆಯ ಮಹಿಂದ್ರಾ ಎಕ್ಸ್​ಯುವಿ 700 ಕಾರನ್ನು ಲಾಂಚ್ ಮಾಡಿದ್ದು ಕಾರುಪ್ರಿಯರಿಂದ ಅದಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. 7-ಆಸನಗಳ ಈ ಎಸ್ಯುವಿ ಭಾರಿ ಸ್ಪರ್ಧಾತ್ಮಕ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋರೂಮ್ ಬೆಲೆ 11.99 ಲಕ್ಷ ಆಗಿದ್ದು ಇದಕ್ಕಿಂತ ಮೊದಲಿನ ಮಾಡೆಲ್ ಆಗಿದ್ದ ಎಕ್ಸ್​ಯುವಿ 500 ಕಾರಿಗೆ ಹೋಲಿಸಿದರೆ ಲಾಂಚ್ ಅಗಿರುವ ಹೊಸ ಕಾರಿನ ಬೆಲೆಯಲ್ಲಿ ಗಮನಾರ್ಹ ಕಡಿತ ಮಾಡಲಾಗಿದೆ. ಅಸಲಿಗೆ ಮಹಿಂದ್ರಾ ಗ್ರೂಪ್, ತನ್ನ ಎಕ್ಸ್​ಯುವಿ 500 ಕಾರಿಗೆ ರಿಪ್ಲೇಸ್ಮೆಂಟ್ ಆಗಿ ಎಕ್ಸ್​ಯುವಿ700 ಕಾರನ್ನು ಲಾಂಚ್ ಮಾಡಿದೆ.

ಮಹೀಂದ್ರಾ & ಮಹೀಂದ್ರಾ ಸಂಸ್ಥೆಯು ಎಕ್ಸ್​ಯುವಿ500 ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ನಂತರ ಗ್ರಾಮೀಣ ಬಾಗಗಳಲ್ಲೇ ಹೆಚ್ಚು ಪ್ರಯೋಜನವಾಗುತ್ತಿದ್ದ ವಾಹನಗಳ ತಯಾರಿಕೆಯಿಂದ ನಗರಪ್ರದೇಶಗಳಿಗೆ ವಿನ್ಯಾಸಗೊಳಿಸಿರುವ ಅತ್ಯಾಧುನಿಕ XUV700 ಎಸ್‌ಯುವಿಗಳ ಉತ್ಪಾದನೆಯಲ್ಲಿ ತೊಡಗಿ ಈ ಸೆಗ್ಮೆಂಟ್ನಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿಕೊಂಡಿದೆ.

ಕಂಪನಿಯ ಕಾರುಗಳು ಭಾರಿ ಜನಪ್ರಿಯತೆ ಕಂಡುಕೊಂಡಿರುವುದರಲ್ಲಿ ಎರಡು ಮಾತಿಲ್ಲ. ತನ್ನ ಕಾರುಗಳ ಮೂಲಕ ಮಹೀಂದ್ರಾ & ಮಹೀಂದ್ರಾ ಸಂಸ್ಥೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಕುದುರಿಸಿಕೊಂಡಿದೆ.

ಐದು-ಸೀಟರ್ ಎಸ್ಯುವಿಗಳ ಪರ್ಯಾಯವಾಗಿ ಮಾರುಕಟ್ಟೆ ಪ್ರವೇಶಿಸಿರುವ ಕ್ರೇಟಾ-ಆಧಾರಿತ ಹ್ಯುಂಡೈ ಅಲ್ಕಾಜಾರ್, ಹ್ಯಾರಿಯರ್-ಆಧಾರಿತ ಟಾಟಾ ಸಫಾರಿ ಮತ್ತು ಮೂರು ಸಾಲಿನ ರೂಪಾಂತರದ ಎಮ್ಜಿ ಸೆಕ್ಟರ್- ಎಮ್ ಸೆಕ್ಟರ್ ಪ್ಲಸ್ ಮೊದಲಾದವು ಒಳಗೊಂಡಂತೆ ಹಲವಾರು ಕಾರುಗಳಿಗಿಂತ ಮಹೀಂದ್ರಾ ಎಕ್ಸ್ ಯುವಿ700 ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Shocking Video: ಫ್ಯಾಮಿಲಿ ಡಿನ್ನರ್ ವೇಳೆ ಮಗುವಿನ ಪಕ್ಕದಲ್ಲೇ ಮುರಿದು ಬಿತ್ತು ಸೀಲಿಂಗ್ ಫ್ಯಾನ್; ಶಾಕಿಂಗ್ ವಿಡಿಯೋ ಇಲ್ಲಿದೆ 

Published on: Aug 26, 2021 06:40 PM