Madagaja: ಅಭಿಮಾನಿಗಳಿಗೆ ಶ್ರೀಮುರಳಿ ಕಡೆಯಿಂದ ಸಿಹಿಸುದ್ದಿ; ಶೂಟಿಂಗ್​ ಪೂರ್ಣಗೊಳಿಸಿದ ಮದಗಜ ತಂಡ 

'ಭರಾಟೆ' ನಂತರ ಶ್ರೀಮುರಳಿ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಈ ಕಾರಣಕ್ಕೆ ‘ಮದಗಜ’ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾದು ಕೂತಿದ್ದಾರೆ. 

Madagaja: ಅಭಿಮಾನಿಗಳಿಗೆ ಶ್ರೀಮುರಳಿ ಕಡೆಯಿಂದ ಸಿಹಿಸುದ್ದಿ; ಶೂಟಿಂಗ್​ ಪೂರ್ಣಗೊಳಿಸಿದ ಮದಗಜ ತಂಡ 
| Updated By: ರಾಜೇಶ್ ದುಗ್ಗುಮನೆ

Updated on: Aug 26, 2021 | 9:48 PM

ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಹೇಶ್​ ಕುಮಾರ್​ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತಂಡ ಸಿಹಿಸುದ್ದಿ ನೀಡಿದೆ. ಸತತ 74 ದಿನಗಳ ಕಾಲ ಶೂಟಿಂಗ್​ ನಡೆಸಿದ ತಂಡ ಈಗ ಚಿತ್ರೀಕರಣ ಪೂರ್ಣಗೊಳಿಸಿದೆ. ಈ ಮೂಲಕ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಚಾಲನೆ ನೀಡಿದೆ.

2019ರಲ್ಲಿ ತೆರೆಗೆ ಬಂದ ‘ಭರಾಟೆ’ ನಂತರ ಶ್ರೀಮುರಳಿ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಈ ಕಾರಣಕ್ಕೆ ‘ಮದಗಜ’ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾದು ಕೂತಿದ್ದಾರೆ.

ಇದನ್ನೂ ಓದಿ: Sri Murali: ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಸಿಂಹ ಗರ್ಜನೆ ತೋರಿಸಿದ ಪುಟಾಣಿ ಪೋರ!

ಮದಗಜ ಶೂಟಿಂಗ್​ ವೇಳೆ ಜ್ಯೂನಿಯರ್​ ಆರ್ಟಿಸ್ಟ್​ಗೆ ಪೆಟ್ಟು; ಕ್ಷಮೆ ಕೇಳಿ, ಚಿಕಿತ್ಸೆ ಕೊಡಿಸಿದ ಶ್ರೀಮುರಳಿ

Follow us